Sunday, November 1, 2026
spot_imgspot_img
spot_imgspot_img

ಪುತ್ತೂರು: ವಿದ್ಯಾರ್ಥಿನಿ ಸಜ್ಞಾ ಇಸ್ಮಾಯಿಲ್ ಕೈ ಬರೆಹದಲ್ಲಿ ಮೂಡಿದ ಪವಿತ್ರ ಕುರ್‌ಆನ್

- Advertisement -
- Advertisement -

ಪುತ್ತೂರು: ಶಾಯಿಯಲ್ಲಿ ಅದ್ದುವ ಪೆನ್ ಬಳಸಿ, ಕುರ್ ಆನ್ ಬರೆದು ತಾಲ್ಲೂಕಿನ ಕುಂಬ್ರದ ಮರ್ಕಝುಲ್ ಹುದಾ ಮಹಿಳಾ ಕಾಲೇಜು ವಿದ್ಯಾರ್ಥಿನಿ ಗಮನ ಸೆಳೆದಿದ್ದಾರೆ.

ಕಾಲೇಜಿನಲ್ಲಿ ಬಿ.ಕಾಂ ವಿದ್ಯಾರ್ಥಿನಿ, ಕಡಬ ತಾಲ್ಲೂಕಿನ ಕಾಣಿಯೂರು ಗ್ರಾಮದ ಬೈತಡ್ಕ ನಿವಾಸಿ ಇಸ್ಮಾಯಿಲ್-ಝಹ್ರಾ ಜಾಸ್ಮಿನ್ ದಂಪತಿ ಪುತ್ರಿ ಸಜ್ಞಾ ಈ ಸಾಧನೆ ಮಾಡಿದವರು.ಸಜ್ಞಾ ಸುಮಾರು 5 ವರ್ಷ ಪರಿಶ್ರಮದಿಂದ ಇದನ್ನು ಸಾಧಿಸಿದ್ದಾರೆ. 2021ರ ಜನವರಿಯಲ್ಲಿ ಬರವಣಿಗೆ ಆರಂಭಿಸಿ, 2025ರ ಆಗಸ್ಟ್‌ನಲ್ಲಿ ಪೂರ್ಣಗೊಳಿಸಿದ್ದಾರೆ.ಒಂದು ಪುಟ ಬರೆಯಲು 4 ಗಂಟೆ ಬೇಕಾಗುತ್ತಿತ್ತು. ಕೆಲವು ದಿನ 8 ಗಂಟೆ ಬಳಸಿ 2 ಪುಟ ಬರೆದಿದ್ದೇನೆ. 302 ದಿನದಲ್ಲಿ (2,416 ಗಂಟೆ) ಈ ಕಾರ್ಯ ಪೂರ್ಣಗೊಳಿಸಿದ್ದೇನೆ ಎಂದು ಸಜ್ಞಾ ಇಸ್ಮಾಯಿಲ್ ಅವರು ಪ್ರತಿಕ್ರಿಯಿಸಿದರು.

- Advertisement -

Related news

error: Content is protected !!