Sunday, November 1, 2026
spot_imgspot_img
spot_imgspot_img

ಬಾರ್ಬರಿಕ್ ಸೇನಾ ವಿಟ್ಲ ವತಿಯಿಂದ ಮನ್ವಿತ್ ಸುವರ್ಣ ಸ್ಮರಣಾರ್ಥ, RMSA ಶಾಲೆ ಹಾಗೂ ಭಾರತೀಯ ರೆಡ್ ಕ್ರಾಸ್ ರಕ್ತ ನಿಧಿ ಕೇಂದ್ರ ಮಂಗಳೂರು ಇವರ ಸಹಯೋಗದಲ್ಲಿ ರಕ್ತದಾನ ಶಿಬಿರ

- Advertisement -
- Advertisement -

ವಿಟ್ಲ: ಬಾರ್ಬರಿಕ್ ಸೇನಾ ವಿಟ್ಲ ಹಾಗೂ ಮನ್ವಿತ್ ಸುವರ್ಣ ಸ್ಮರಣಾರ್ಥ, RMSA ಶಾಲೆ ಹಾಗೂ ಭಾರತೀಯ ರೆಡ್ ಕ್ರಾಸ್ ರಕ್ತ ನಿಧಿ ಕೇಂದ್ರ ಮಂಗಳೂರು ಇವರ ಸಹಯೋಗದಲ್ಲಿ ರಕ್ತದಾನ ಶಿಬಿರವು ನವೆಂಬರ್ 01, 2026 ಆದಿತ್ಯವಾರದಂದು ನಡೆಯಿತು.

ವಿಟ್ಲದ RMSA ವಿಟ್ಲ (ಮಾದರಿ ಶಾಲೆ) ಯಲ್ಲಿ ಬೆಳಿಗ್ಗೆ ರಕ್ತದಾನ ಶಿಬಿರದ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ವಿಟ್ಲ ಅರಮನೆ ಕೃಷ್ಣಯ್ಯ ಬಲ್ಲಾಳ್ ಅವರು ದೀಪ ಬೆಳಗಿಸಿ ಉದ್ಘಾಟನೆಯನ್ನು ನೆರವೇರಿಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರ್, ಮಂಗಳೂರು ಜಿಲ್ಲಾ ಕುಸ್ತಿ ಸಂಘದ ಉಪಾಧ್ಯಕ್ಷರಾದ ರಾಮದಾಸ್ ಶೆಟ್ಟಿ(V tv), ವಿಟ್ಲ ಪಟ್ಟಣ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷರಾದ ಅಶೋಕ್ ಶೆಟ್ಟಿ, VRC ವಿಟ್ಲ ಸ್ಥಾಪಕಾಧ್ಯಕ್ಷರಾದ ರಮಾನಾಥ ವಿಟ್ಲ, ಪಟ್ಟಣ ಪಂಚಾಯತ್ ಸದಸ್ಯ ರವೀಶ್ ವಿಟ್ಲ, ರವಿಶಂಕರ್‍ ಶಾಸ್ತ್ರಿ SDMC ಅಧ್ಯಕ್ಷರು RMSA, ವಾರಿಜ HM, ಭರತೇಶ್ ನೆಲ್ಯಾಡಿ ಸೋಶಿಯಲ್ ಮೀಡಿಯಾ, ಶಾಕೀರ್‍ ಅಳಕೆಮಜಲು ಅಧ್ಯಕ್ಷರು D. GROUP ಮತ್ತು ಬಾರ್ಬರಿಕ್ ಸೇನಾ ಪದಾದಿಕಾರಗಳು ಉಪಸ್ಥಿತರಿದ್ದರು. ಅನೇಕ ಯುವಕರು ರಕ್ತದಾನ ಶಿಬಿರದಲ್ಲಿ ಭಾಗವಹಿಸಿದರು.

- Advertisement -

Related news

error: Content is protected !!