Sunday, July 6, 2025
spot_imgspot_img
spot_imgspot_img

ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತರಲು ವಿಶ್ವ ಹಿಂದೂ ಪರಿಷತ್ ಬಜರಂಗದಳದಿಂದ ಒತ್ತಾಯ

- Advertisement -
- Advertisement -

ವಿಟ್ಲ: ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ಆಗ್ರಹಿಸಿ ಹಾಗೂ ಗೋಮಾಳ ಅಭಿವೃದ್ಧಿ ಮಾಡಿ ಜಾನುವಾರುಗಳಿಗೆ ಉಪಯೋಗವಾಗುವಂತೆ ಸೌಕರ್ಯ ಹಾಗೂ ರಕ್ಷಣೆಗೆ ಆಗ್ರಹಿಸಿ 1/12/2020 ರಂದು ವಿಟ್ಲ ಪಡ್ನೂರು ಗ್ರಾಮ ವ್ಯಾಪ್ತಿಯ ವಿಶ್ವ ಹಿಂದೂ ಪರಿಷತ್ ಬಜರಂಗದಳ ಕಾಪುಮಜಲು ಘಟಕ ಮತ್ತು ಪೂರ್ಲಪ್ಪಾಡಿ ಘಟಕದ ವತಿಯಿಂದ ಗ್ರಾಮ ಪಂಚಾಯಿತಿ ಪಿಡಿಓ ಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಭಜರಂಗದಳ ಕಾಪುಮಜಲು ಘಟಕದ ಗೋ ರಕ್ಷಣಾ ಪ್ರಮುಖ್ ಪ್ರಶಾಂತ್ ಗಾಣಿಗ, ಸತ್ಸಂಗ ಪ್ರಮುಖ್ ವಸಂತ ಮಡಿವಾಳ ಕಾಪುಮಜಲು, ಭಜರಂಗದಳ ಪೂರ್ಲಪ್ಪಾಡಿ ಘಟಕದ ಸಂಚಾಲಕರು ಯತೀಶ್ ಪೂರ್ಲಪ್ಪಾಡಿ ಹಾಗೂ ಘಟಕದ ಕಾರ್ಯಕರ್ತರು ಉಪಸ್ಥಿತರಿದ್ದರು.

- Advertisement -

Related news

error: Content is protected !!