Sunday, June 28, 2026
spot_imgspot_img
spot_imgspot_img

ವಿಟ್ಲ: ವಿಠಲ್ ಜೇಸಿಸ್ ಶಾಲೆಯಲ್ಲಿ ಪೋಷಕರ ಸಭೆ

- Advertisement -
- Advertisement -

ವಿಟ್ಲ ಬಸವನಗುಡಿಯಲ್ಲಿರುವ ವಿಠಲ್ ಜೇಸೀಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ 2025 – 26ನೇ ಶೈಕ್ಷಣಿಕ ವರ್ಷದ ಪ್ರಥಮ ಸುತ್ತಿನ ಪೋಷಕರ ಸಭೆಯು ದಿನಾಂಕ 23-8-2025 ರಂದು ಜರುಗಿತು.

ಬೆಳಗಿನ ಅವಧಿಯಲ್ಲಿ ಪೂರ್ವ ಪ್ರಾಥಮಿಕ ತರಗತಿಗಳ ಹೆತ್ತವರ ಸಭೆಯನ್ನು ನಡೆಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿ, ಸಂಪನ್ಮೂಲ ವ್ಯಕ್ತಿ ಶರತ್ ಕುಮಾರ್ ಚೌಟ ರವರು, ವಿಠಲ್ ಜೇಸೀಸ್ ಬಹಳ ಪ್ರತಿಷ್ಠಿತ ಶಾಲೆ, ಇಲ್ಲಿ ಪಠ್ಯೇತರ ಚಟುವಟಿಕೆಗಳಿಗೂ ಹೆಚ್ಚು ಒತ್ತು ನೀಡಲಾಗುತ್ತದೆ. ಪೋಷಕರು ಮತ್ತು ಶಿಕ್ಷಕರ ಸಹಕಾರದಿಂದ ಮಕ್ಕಳ ಉತ್ತಮ ಭವಿಷ್ಯ ಸಾಧ್ಯ ಎಂದರು. ನಂತರದ ಅವಧಿಯಲ್ಲಿ ಕಿರಿಯ ಪ್ರಾಥಮಿಕ ವಿಭಾಗದ ಪೋಷಕರ ಸಭೆ ನಡೆಯಿತು. ಕಾರ್ಯಕ್ರಮದ ಮುಖ್ಯ ಅತಿಥಿ ಹಾಗೂ ಸಂಪನ್ಮೂಲ ವ್ಯಕ್ತಿ ಪರಮೇಶ್ವರ ಹೆಗ್ಡೆ ಯವರು, ಶಿಕ್ಷಣ ಕೇವಲ ಪಾಠವಲ್ಲ, ಪ್ರತಿ ಹಂತದಲ್ಲೂ ಹೊಸತನದಿಂದ ಕಲಿಯಬೇಕು. ಇಲ್ಲಿ ಪೋಷಕರ ಸಹಕಾರವೂ ಅತಿ ಮುಖ್ಯ ಎಂದರು. ಸಭೆಯ ಅಧ್ಯಕ್ಷತೆಯನ್ನು ವಹಿಸಿದ ಸಂಸ್ಥೆಯ ಅಧ್ಯಕ್ಷರಾದ, ಜೇಸಿ ಶ್ರೀಧರ ಶೆಟ್ಟಿಯವರು ” ಶಾಲೆಯ ಅಭಿವೃದ್ಧಿಯಲ್ಲಿ ಪೋಷಕರ ಸಲಹೆ ಸೂಚನೆ- ಪ್ರೋತ್ಸಾಹ ಮುಖ್ಯ ಎಂದರು. ಲೀಡ್ ಅಕಾಡೆಮಿಯ ಸೀನಿಯರ್ ಎಡ್ವೈಸರ್, ಮೊಹಮ್ಮದ್ ನಾಸಿರ್ ರವರು ಲೀಡ್ ಪಠ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು. ಸಂಸ್ಥೆಯ ಆಡಳಿತಾಧಿಕಾರಿಯಾದ ರಾಧಾಕೃಷ್ಣ ಎರುಂಬುರವರು ಸಂಸ್ಥೆಯ ಧ್ಯೇಯೋದ್ದೇಶಗಳ ಬಗ್ಗೆ ಮಾತನಾಡಿದರು. ಹೆತ್ತವರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಪೋಷಕರ ಪ್ರಶ್ನೆಗಳಿಗೆ ಪ್ರಾಂಶುಪಾಲರಾದ ಶ್ರೀ ಜಯರಾಮ ರೈ ಅವರು ಸಮರ್ಪಕವಾದ ಸ್ಪಷ್ಟನೆ ನೀಡಿದರು.ಉಪಪ್ರಾಂಶುಪಾಲೆ ಶ್ರೀಮತಿ ಜ್ಯೋತಿ ಶೆಣೈ ಉಪಸ್ಥಿತರಿದ್ದರು. ಶ್ರೀಮತಿ ಸ್ವಾತಿ ಹಾಗೂ ಶ್ರೀಮತಿ ಮಾನಸ ಪ್ರಾರ್ಥಿಸಿದರು. ಶ್ರೀಮತಿ ದೀಪಾ ಹಾಗೂ ಶ್ರೀಮತಿ ಸೌಮ್ಯ ಸಾವಿತ್ರಿಯವರು ಪೋಷಕರಿಗೆ ಕೆಲವು ಸಲಹೆಗಳನ್ನು ಕೊಟ್ಟರು. ಶ್ರೀಮತಿ ಹರ್ಷಿತಾ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು, ಶ್ರೀಮತಿ ವಿದ್ಯಾಶ್ರೀ ಹಾಗೂ ಶ್ರೀಮತಿ ತೇಜಸ್ವಿನಿ ಯವರು ಕಾರ್ಯಕ್ರಮ ನಿರೂಪಿಸಿದರು, ಶ್ರೀಮತಿ ಶಾಲೆಟ್ ಪಿಂಟೋ ವಂದಿಸಿದರು. ಶಿಕ್ಷಕ -ಶಿಕ್ಷಕೇತರರು, ಹೆತ್ತವರು ಉಪಸ್ಥಿತರಿದ್ದರು.

- Advertisement -

Related news

error: Content is protected !!