ಸಂಬಂಧದ ಸುಸ್ಥಿರತೆಗೆ ಸಮಾಜದ ಬೆಸುಗೆಯೇ ಸೇತುವೆ - ರಾಧಾಕೃಷ್ಣ ಎರುಂಬು





ಕುಲಾಲ ಸಮಾಜ ಸೇವಾ ಸಂಘ (ರಿ.) ರಾಮಕುಂಜ ವತಿಯಿಂದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಸಭಾಕಾರ್ಯಕ್ರಮವು ಸಂಘದ ಅಧ್ಯಕ್ಷ ಹರೀಶ್ ಕುಲಾಲ್ ರವರ ಅದ್ಯಕ್ಷತೆಯಲ್ಲಿ ರಾಮಕುಂಜೇಶ್ವರ ದೇವಸ್ಥಾನದಲ್ಲಿ ವಿಜೃಂಭಣೆಯಿಂದ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಉಪನ್ಯಾಸಕ ಹಾಗೂ ಕುಲಾಲ ಸಂಘ ವಿಟ್ಲದ ಉಪಾಧ್ಯಕ್ಷ ರಾಧಾಕೃಷ್ಣ ಎರುಂಬು ಮಾತನಾಡಿ “ಜೀವ ದೇವರ ಕೊಡುಗೆಯಾದರೆ ಜೀವನ ನಮ್ಮ ಸಾಧನೆಯ ಹುಟ್ಟು, ಇಲ್ಲಿ ಸಂಬಂಧದ ಸುಸ್ಥಿರತೆಗೆ ಸಮಾಜದ ಬೆಸುಗೆಯೇ ಸೇತುವೆಯಾಗುತ್ತದೆ ಎಂದರು.

ಸಂಘದ ನೂತನ ಸಮಿತಿಯನ್ನು ಉದ್ಘಾಟಿಸಿ ಮಾತನಾಡಿದ ಪುತ್ತೂರು ಕುಲಾಲ ಸಂಘದ ಅಧ್ಯಕ್ಷ ಶೇಷಪ್ಪ ಕುಲಾಲ್ ರವರು ಸ್ವ ಸಮಾಜದ ಬೆಳವಣಿಗೆಗೆ ಸಂಘಗಳ ಅವಶ್ಯಕತೆ ಇದೆ ಇದಕ್ಕೆ ಎಲ್ಲರೂ ಕೈ ಜೋಡಿಸಬೇಕು ಎಂದರು. ಉಪನ್ಯಾಸಕ ಜಯೇಂದ್ರ, ವಕೀಲ ಮಹೇಶ್ ಸವಣೂರುರವರು ನೂತನ ಸಮಿತಿಗೆ ಜವಾಬ್ದಾರಿಯನ್ನು ಹಸ್ತಾಂತರಿಸಿ ಕಾರ್ಯಕ್ರಮಕ್ಕೆ ಶುಭಾಂಸನೆಗೈದರು. ಮಹಿಳಾ ಘಟಕದ ಅಧ್ಯಕ್ಷೆ ಕಾವ್ಯ ಜನಾರ್ಧನ್, ಕಾರ್ಯದರ್ಶಿ ಚಂದ್ರಶೇಖರ ಉಪಸ್ಥಿತರಿದ್ದರು.
30 ವರ್ಷಗಳಿಂದ ಸಂಘದ ಹಿರಿಯರಾದ ಪೊಡಿಯ ಮೂಲ್ಯ, ಮೋನಪ್ಪ ಕುಲಾಲ್ ಬೊಳ್ಳ ರೋಡಿ,ಚೆನ್ನಪ್ಪ ಕುಲಾಲ್ ಬೊಳ್ಳ ರೋಡಿ, ಪೂವಪ್ಪ ಕುಲಾಲ್ ಕಂಪ, ಬಾಬು ಕುಲಾಲ್ ಪಾದೆಯವರನ್ನು ಗೌರವಿಸಲಾಯಿತು. ಪ್ರಸ್ತುತ ವರ್ಷದಲ್ಲಿ ನಿಧನರಾದ ಸಮಾಜದ ಹಿರಿಯರಿಗೆ ಸಂತಾಪ ವ್ಯಕ್ತ ಪಡಿಸಲಾಯಿತು.
ಕುಮಾರಿ ಕುಮಾರಿ ಶ್ರೇಷ್ಠ ಮತ್ತು ಬ್ರಿಜೇಶ್ ಬರೆಂಬಾಡಿ ರವರು ಪ್ರಾರ್ಥಿಸಿದರು. ಶ್ರೀಮತಿ ಚಿತ್ರ ಹರೀಶ್ ಹೊಸ ಮಣ್ಣುರವರು ಸ್ವಾಗತಿಸಿದ ಕಾರ್ಯಕ್ರಮದಲ್ಲಿ ಯೋಗೀಶ್ ಕುಲಾಲ್ ಶಾರದನಗರರವರು ವಂದನಾರ್ಪಣೆಗೈದರು. ಶಶಿಕಲಾ ನಯನ ಕುಲಾಲ್ ಕಜೆ ಮತ್ತು ರಮೇಶ್ ಕುಲಾಲ್ ಕುಂಡಡ್ಕರವರು ಕಾರ್ಯಕ್ರಮ ನಿರೂಪಿಸಿದರು. ಬಳಿಕ ಭೋಜನ ಪ್ರಸಾದ ನಡೆಯಿತು.









