- Advertisement -
- Advertisement -





ಶ್ರೀ ದುರ್ಗಾ ಮಿತ್ರ ವೃಂದ (ರಿ.) ಮೈರ – ಕೇಪು ವತಿಯಿಂದ ಗಣೇಶ ಚತುರ್ಥಿಯ ಪ್ರಯುಕ್ತ ವಿವಿಧ ಸ್ಪರ್ಧೆಗಳು ದಿನಾಂಕ 31-08-2025 ರಂದು ನಡೆಯಿತು.
ವೃಂದದ ಅಧ್ಯಕ್ಷ ಪುರುಷೋತ್ತಮ ಗೌಡ ಕಲ್ಲಂಗಳ ದ್ವಜಾರೋಹಣ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ವೃಂದದ ಸ್ಥಾಪಕ ಸದಸ್ಯರಾದ ಪುರುಷೋತ್ತಮ ಪುತ್ತೂರು, ಜಗಜೀವನ್ ರಾಮ್ ಶೆಟ್ಟಿ, ಬೇಡೆಮಾರ್, ಶಿಸ್ತು ಸಮಿತಿ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಬೇಂಗ್ರೋಡಿ , ಪ್ರಧಾನ ಕಾರ್ಯದರ್ಶಿ ಮಿಥುನ್, ಕ್ರೀಡಾ ಕಾರ್ಯದರ್ಶಿ ಗಿರೀಶ, ಸಂಘಟನಾ ಕಾರ್ಯದರ್ಶಿ ಸುಧಾಕರ ಪೂಜಾರಿ ಬಡೆಕೋಡಿ, ಕೋಶಾಧಿಕಾರಿ ಭರತ್ ಇರಾಮೂಲೆ ಅಲ್ಲದೆ ವೃಂದದ ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರು ಉಪಸ್ಥಿತರಿದ್ದರು.

- Advertisement -








