



ಮಂಗಳೂರು: ಜಮೀಯ್ಯತುಲ್ ಫಲಾಹ್ ಜಿಲ್ಲಾ ಘಟಕದ ವಾರ್ಷಿಕ ಮಹಾಸಭೆಯು ಭಾನುವಾರ ಜೆ.ಎಫ್ ಸಮುದಾಯ ಭವನ ಕಂಕನಾಡಿ ಮಂಗಳೂರು ಇಲ್ಲಿ ನಡೆಯಿತು.
ಕಳೆದ ಎರಡು ವರ್ಷದ ಅವಧಿಯಲ್ಲಿ ಮಾಡಿರುವ ಸೇವೆಗಾಗಿ ಬಂಟ್ವಾಳ ಜಮೀಯ್ಯತುಲ್ ಫಲಾಹ್ ದ.ಕ. ಮತ್ತು ಉಡುಪಿ ಜಿಲ್ಲೆಗಳಲ್ಲಿರುವ 14 ಘಟಕಗಳಲ್ಲಿ ಟಾಪ್ ವನ್ ಘಟಕವಾಗಿ ಮೂಡಿ ಬಂದಿದ್ದು, ವಿಶೇಷ ಸ್ಮರಣಿಕೆ ನೀಡಿ ಗೌರವಿಸಲಾಯಿತು.


ಕಂಕನಾಡಿ ಜಮೀಯ್ಯತುಲ್ ಫಲಾಹ್ ಹಾಲ್ ನಲ್ಲಿ ನಿರ್ಗಮನ ಜಿಲ್ಲಾಧ್ಯಕ್ಷ ಕೆ.ಕೆ. ಶಾಹುಲ್ ಹಮೀದ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಬಂಟ್ವಾಳ ಘಟಕದ ನಿರ್ಗಮನ ಅಧ್ಯಕ್ಷ ರಶೀದ್ ವಿಟ್ಲ ಅವರನ್ನು ಅತ್ಯುತ್ತಮ ಸೇವೆಗಳಿಗಾಗಿ, ಘಟಕವನ್ನು ಸಕ್ರಿಯಗೊಳಿಸಿದ್ದಕ್ಕಾಗಿ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಕಳೆದ 25 ವರ್ಷಗಳಿಂದ ಬಂಟ್ವಾಳ ಘಟಕದ ಸಭೆಗೆ ಉಚಿತ ಸ್ಥಳ ವ್ಯವಸ್ಥೆ ಮಾಡಿರುವ ನಿರ್ಗಮನ ಕೋಶಾಧಿಕಾರಿ ಎಂ.ಎಚ್. ಇಕ್ಬಾಲ್ ಅವರನ್ನು ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಅಶ್ಫಾಕ್ ಅಹ್ಮದ್ ಹಾಗೂ ಫರ್ವೇಝ್ ಅಲಿ, ಕಾರ್ಯದರ್ಶಿ ಶೇಖ್ ಅಬ್ದುಲ್ ಗಫೂರ್, ಜೊತೆ ಕಾರ್ಯದರ್ಶಿ ಅಬ್ಬೋನು ಮದ್ದಡ್ಕ, ಕೋಶಾಧಿಕಾರಿ ಕೆ.ಎಂ. ಸಿದ್ದೀಕ್, ಅಬೂಬಕರ್ ಸುಳ್ಯ, ಸಮೀರ್ ಉಪಸ್ಥಿತರಿದ್ದರು.









