




ಕಡೇಶಿವಾಲಯ: ಮಹತೋಭಾರ ಚಿಂತಾಮಣಿ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನಲ್ಲಿ ಬ್ರಹ್ಮಶ್ರೀ ಉಚ್ಚಿಲಂತಾಯ ನೀಲೇಶ್ವರ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಸಾರ್ವಜನಿಕ ದೊಡ್ಡರಂಗಪೂಜೆ ಹಾಗೂ ದೇವರ ಉತ್ಸವವು ನ. 8-11-2025ನೇ ಶನಿವಾರ 7:00ಕ್ಕೆ ನಡೆಯಲಿದೆ.
ದಿನಾಂಕ: 08-11-2025ನೇ ಶನಿವಾರ ಬೆಳಿಗ್ಗೆ ನರಸಿಂಹ ದೇವರಿಗೆ ಪಂಚಾಮೃತ ಪವಮಾನ ಅಭಿಷೇಕ, ಕ್ಷೀರಪಾಯಸ, ಮಹಾಪೂಜೆ ಬಳಿಕ ಗಣಪತಿ ಹೋಮ, ಮುಖ್ಯಪ್ರಾಣ ದೇವರಿಗೆ ಪಂಚಾಮೃತ ಅಭಿಷೇಕ, ದೈವಗಳಿಗೆ ಪರ್ವ ನಡೆದು ಬಳಿಕ ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ.

ರಾತ್ರಿ 7:00 ರಿಂದ ದೊಡ್ಡರಂಗಪೂಜೆ ನಡೆದು 8:00ರಿಂದ ಉತ್ಸವ, ಪಲ್ಲಕ್ಕಿ ಉತ್ಸವ, ವಸಂತ ಕಟ್ಟೆ ಪೂಜೆ ಬಳಿಕ ಅಷ್ಟವಧಾನ ಸೇವೆ : ಶಂಖ ಪೋಷ, ಶಾಸ್ತ್ರೀಯ ಸಂಗೀತ, ಭರತನಾಟ್ಯ, ಯಕ್ಷಗಾನ, ಭಜನೆ ಬಳಿಕ ,ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.
ದಿನಾಂಕ: 9-11-2025ರಂದು ಬೆಳಿಗ್ಗೆ ಕಲಶ ಪ್ರಧಾನ ಹೋಮ, ಕಲಶಾಭಿಷೇಕ, ಮಹಾಪೂಜೆ, ನಡೆದು ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ.

ವಿಶೇಷ ಸೂಚನೆ: ಭಕ್ತಾಧಿಗಳಿಂದ ಹೂ ಹಿಂಗಾರ, ಅಕ್ಕಿ, ತೆಂಗಿನಕಾಯಿ ಧನ ಸಹಾಯ, ಕೃತಜ್ಞತಾ ಪೂರ್ವಕವಾಗಿ ಸ್ವೀಕರಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.








