Friday, July 24, 2026
spot_imgspot_img
spot_imgspot_img

ಬೆಂಗಳೂರಿನಿಂದ ಜಿಂದಾಲ್ ಏರ್​ಪೋರ್ಟ್​​ಗೆ ಸ್ಟಾರ್ ಏರ್ ಫ್ಲೈಟ್ ಸೇವೆ ಆರಂಭ

- Advertisement -
- Advertisement -

ಬೆಂಗಳೂರು: ಪ್ರಾದೇಶಿಕ ವೈಮಾನಿಕ ಕಂಪನಿಯಾದ ಸ್ಟಾರ್ ಏರ್ ಇದೀಗ ಕರ್ನಾಟಕದಲ್ಲಿ ತನ್ನ ಸಂಪರ್ಕ ಜಾಲ ಹೆಚ್ಚಿಸಿದೆ.

ಬೆಂಗಳೂರಿನಿಂದ ವಿಜಯನಗರಕ್ಕೆ ಫ್ಲೈಟ್ ಸೇವೆ ಆರಂಭಿಸಿದೆ. ವಿಜಯನಗರ ಜಿಲ್ಲೆಯ ಖ್ಯಾತ ಪ್ರವಾಸಿ ತಾಣವಾದ ಹಂಪಿಗೆ ತೆರಳಲು ಬಯಸುವ ಪ್ರವಾಸಿಗರಿಗೆ ಈ ಫ್ಲೈಟ್ ಬಹಳ ಪ್ರಯೋಜನವಾಗಲಿದೆ. ಹಂಪಿ ಸಮೀಪವೇ ಇರುವ ಜಿಂದಾಲ್ ವಿದ್ಯಾನಗರ ಏರ್​ಪೋರ್ಟ್ ಅನ್ನು ಈ ಫ್ಲೈಟ್ ಸಂಪರ್ಕಿಸುತ್ತದೆ.

ಸಂಜಯ್ ಘೋದಾವತ್ ಗ್ರೂಪ್​ಗೆ ಸೇರಿದ ಸ್ಟಾರ್ ಏರ್ ಸಂಸ್ಥೆಗೆ ಇದು 32ನೇ ಮಾರ್ಗವಾಗಿದೆ. ದೇಶಾದ್ಯಂತ ವಿವಿಧ ಪ್ರದೇಶಗಳನ್ನು ಸಂಪರ್ಕಿಸುವ ಮಹತ್ವದ ಜಾಲ ನಿರ್ಮಿಸಿದೆ. ಕರ್ನಾಟಕದಲ್ಲಿ ಬೆಂಗಳೂರು, ಹಂಪಿ ಅಲ್ಲದೇ, ಹುಬ್ಬಳ್ಳಿ ಬೆಳಗಾವಿ, ಬೀದರ್, ಶಿವಮೊಗ್ಗ ನಗರಗಳಿಗೂ ಫ್ಲೈಟ್ ಸೇವೆ ನೀಡುತ್ತಿದೆ .

ಬೆಂಗಳೂರಿನಿಂದ ವಿಜಯನಗರದ ವಿದ್ಯಾನಗರ ಏರ್​ಪೋರ್ಟ್​ಗೆ ನಿತ್ಯವೂ ಒಂದು ಫ್ಲೈಟ್ ಇದೆ. ಬೆಳಗ್ಗೆ 9:50ಕ್ಕೆ ಕೆಂಪೇಗೌಡ ಏರ್​ಪೋರ್ಟ್​ನಿಂದ ಹೊರಟು 10:40ಕ್ಕೆ ವಿದ್ಯಾನಗರ ನಿಲ್ದಾಣ ಮುಟ್ಟುತ್ತದೆ. ಒಟ್ಟು 50 ನಿಮಿಷ ಪ್ರಯಾಣ ಅವಧಿ. ಈ ಫ್ಲೈಟ್​ನಲ್ಲಿ ಎಕನಾಮಿ ಮತ್ತು ಬ್ಯುಸಿನೆಸ್ ಕ್ಲಾಸ್​ಗಳಿವೆ. ಎಕನಾಮಿ ಕ್ಲಾಸ್​ನಲ್ಲಿ ಒಂದು ಟಿಕೆಟ್ ಬೆಲೆ 5,250 ರೂನಿಂದ 7,088 ರೂ ಇದೆ. ಬ್ಯುಸಿನೆಸ್ ಕ್ಲಾಸ್​ನ ಟಿಕೆಟ್ ದರ 10,999 ರೂ ಮತ್ತು 13,359 ರೂ ಇದೆ.

ವಿದ್ಯಾನಗರ ಏರ್​ಪೋರ್ಟ್​ನಿಂದ ಬೆಂಗಳೂರಿಗೆ ಬೆಳಗ್ಗೆ 11:10ಕ್ಕೆ ಫ್ಲೈಟ್ ಹೊರಡುತ್ತದೆ. 12 ಗಂಟೆಗೆ ಬೆಂಗಳೂರು ತಲುಪುತ್ತದೆ. ಇಲ್ಲಿ ಎಕನಾಮಿ ಕ್ಲಾಸ್ ಟಿಕೆಟ್ ದರ 1,850 ರೂನಿಂದ ಆರಂಭವಾಗುತ್ತದೆ. ಶನಿವಾರ, ಭಾನುವಾರ ಇತ್ಯಾದಿ ಪೀಕ್ ಇರುವ ದಿನಗಳಲ್ಲಿ ಟಿಕೆಟ್ ದರ ಹೆಚ್ಚಿರುತ್ತದೆ.

- Advertisement -

Related news

error: Content is protected !!