


ಕೇಪು: ಶ್ರೀ ದುರ್ಗಾ ಮಿತ್ರ ವೃಂದ (ರಿ) ಮೈರ- ಕೇಪು ಆಶ್ರಯದಲ್ಲಿ ಮುಕ್ತ ವಾಲಿಬಾಲ್ ಪಂದ್ಯಾಟ ನವೆಂಬರ್ 16 ರಂದು ಮೈರ ಶ್ರೀ ದುರ್ಗಾ ರಂಗ ಮಂದಿರ ಕ್ರೀಡಾಂಗಣದಲ್ಲಿ ಬೆಳಗ್ಗೆ 11 ಗಂಟೆಗೆ ನಡೆಯಲಿದೆ. ಸ್ಪರ್ಧಾ ನಿಯಮಗಳು: * ಪಂದ್ಯಾಟ ವನ್ನು ಸಮಯ ಸರಿಯಾಗಿ ಬೆಳಗ್ಗೆ 11 ಗಂಟೆಗೆ ಪ್ರಾರಂಭಿಸಲಾಗುವುದು. * ಯಾವುದೇ ತಂಡ ಆಶಿಸ್ತಿನಿಂದ ವರ್ತಿಸಿದಲ್ಲಿ ನೀರ್ದ್ಯಾಕ್ಷಿಣ್ಯವಾಗಿ ಹೊರಗಿಡಲಾಗುವುದು.* ಚರ್ಚೆಗೆ ಆಸ್ಪದವಿಲ್ಲ, ತೀರ್ಪು ಗಾರರ ಹಾಗೂ ಸಂಘಟಕರ ತೀರ್ಮಾನ ಅಂತಿಮ. * ಭಾಗವಹಿಸುವ ಎಲ್ಲಾ ತಂಡಗಳು ನವೆಂಬರ್ 15 ರ ಒಳಗಾಗಿ ಪ್ರವೇಶ ಶುಲ್ಕ ದೊಂದಿಗೆ ಹೆಸರು ನೊಂದಾಯಿಸತಕ್ಕದ್ದು. ಪಂದ್ಯಾಟ ಪ್ರವೇಶ ಶುಲ್ಕ 600/- ಆಗಿರುತ್ತದೆ.
ವಿಜೇತ ತಂಡಗಳಿಗೆ ಪ್ರಥಮ 10,000/- ರೂ ನಗದು ಹಾಗೂ SDMV ಟ್ರೋಫಿ, ದ್ವಿತೀಯ ಬಹುಮಾನ 7,000/- ರೂ ನಗದು ಹಾಗೂ SDMV ಟ್ರೋಫಿ, ತೃತೀಯ ಬಹುಮಾನ 4,000/- ರೂ ನಗದು ಹಾಗೂ SDMV ಟ್ರೋಫಿ, ಚತುರ್ಥ ಬಹುಮಾನ ರೂ ನಗದು ಹಾಗೂ SDMV ಟ್ರೋಫಿ ನೀಡಲಾಗುವುದು. ಉತ್ತಮ ಎತ್ತುವಿಕೆಗಾರ, ಉತ್ತಮ ಹೊಡೆತಗಾರ ಹಾಗೂ ಸವ್ಯಸಾಚಿ ಪ್ರಶಸ್ತಿ ಹಾಗೂ ವೈಯಕ್ತಿಕ ಬಹುಮಾನ ಗಳನ್ನು ನೀಡಿ ಗೌರವಿಸಲಾಗುವುದು.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 7349775748, 8762046438, 8197484399








