Saturday, September 5, 2026
spot_imgspot_img
spot_imgspot_img

ಬೆಂಗಳೂರು: ದ ಕ ಜಿಲ್ಲೆಯ ಪ್ರತಿಷ್ಠಿತ ಪ್ರೀತಿ ಬೀಡಿ ಕಂಪೆನಿಯ ಹೆಸರಿನಲ್ಲಿ ನಕಲಿ ಬೀಡಿ ಮಾರಾಟ

- Advertisement -
- Advertisement -

ಆರೋಪಿ ಬಂಟ್ವಾಳ ಮೂಲದ ಸೆರ್ಕಳ ನಿವಾಸಿ ಅಬ್ದುಲ್ ರೆಹಮಾನ್ ವಿರುದ್ಧ ಬೆಂಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಬೆಂಗಳೂರು: ದ ಕ ಜಿಲ್ಲೆಯ ಬಂಟ್ವಾಳ ತಾಲೂಕಿನ ಬೋಳಂತೂರು ಕಲ್ಪನೆಯಲ್ಲಿರುವ ಪ್ರತಿಷ್ಠಿತ ಪ್ರೀತಿ ಬೀಡಿ ಕಂಪೆನಿಯ ಹೆಸರಿನಲ್ಲಿ ನಕಲಿ ಬೀಡಿ ತಯಾರಿಸಿ ಬೆಂಗಳೂರಿನಲ್ಲಿ ಮಾರಾಟ ಮಾಡುತ್ತಿರುವ ವ್ಯಕ್ತಿ ಯನ್ನು ಪತ್ತೆ ಹಚ್ಚಿರುವ ಬಗ್ಗೆ ಬೆಂಗಳೂರು ನಗರ ಆರ್ ಎಂ ಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣದ ಪ್ರಮುಖ ಆರೋಪಿ ಬಂಟ್ವಾಳ ಮೂಲದ ಸೆರ್ಕಳ ನಿವಾಸಿ ಅಬ್ದುಲ್ ರೆಹಮಾನ್. ಪ್ರೀತಿ ಬೀಡಿ ಕಂಪೆನಿಯ ಬೀಡಿಗಳನ್ನು ಬೆಂಗಳೂರು ನಗರದ ಬೇರೆ ಬೇರೆ ಏರಿಯಾಗಳಲ್ಲಿ ಡೀಲರ್ಸ್ ಗಳಿಗೆ ಮತ್ತು ಸೇಲ್ಸ್ ಮಾಡುವ ಅಂಗಡಿಗಳಿಗೆ ಮಾರಾಟ ಮಾಡುತ್ತಿದ್ದ ವೇಳೆ ಪ್ರೀತಿ ಹೆಸರಿನ ನಕಲಿ ಬೀಡಿಗಳು ಬೆಂಗಳೂರು ನಗರಗಳಲ್ಲಿ ಮಾರಾಟವಾಗುವ ಪ್ರೀತಿ ಬೀಡಿ ಕಂಪೆನಿ ಮಾಲಕರ ಗಮನಕ್ಕೆ ಬಂದಿದ್ದು, ಈ ಬಗ್ಗೆ ವಿಚಾರಿಸುವ ಸಲುವಾಗಿ ಪ್ರೀತಿ ಬೀಡಿ ಕಂಪೆನಿಯವರು ಬೆಂಗಳೂರಿನ ಯಾವ ಪ್ರದೇಶಗಳಲ್ಲಿ ಪ್ರೀತಿ ಕಂಪೆನಿಯ ನಕಲಿ ಬೀಡಿಗಳು ಮಾರಾಟವಾಗುತ್ತಿವೆ ಎಂಬುವುದರ ಬಗ್ಗೆ ತಿಳಿದುಕೊಂಡಿದ್ದಾರೆ. ಈ ಸಂದರ್ಭದಲ್ಲಿ ಯಶವಂತಪುರದ ಲಾರಿ ಸ್ಟ್ಯಾಂಡ್ ನಲ್ಲಿರುವ ಟೀ ಅಂಗಡಿಯ ಬಳಿ ಟೀ ಕುಡಿಯುತ್ತಾ ನಿಂತು ಕೊಂಡಿದ್ದ ವೇಳೆ ಅಸಾಮಿಯೊಬ್ಬ ಬೀಡಿಯನ್ನು ಚೀಲದಲ್ಲಿ ತುಂದು ಟೀ ಅಂಗಡಿ ಗಳಿಗೆ ಮಾರಾಟ ಮಾಡಿರುತ್ತಾನೆ. ಈ ವೇಳೆ ಚೀಲದಲ್ಲಿದ್ದ ಬೀಡಿಗಳನ್ನು ಪರಿಶೀಲಿಸಿದಾಗ ಪ್ರೀತಿ ಕಂಪೆನಿ ಹೆಸರಿನ ನಕಲಿ ಬೀಡಿಗಳು ಪತ್ತೆಯಾಗಿರುತ್ತದೆ. ಈ ವೇಳೆ ಆರೋಪಿ ನನ್ನ ಹೆಸರು ಅಬ್ದುಲ್ ರೆಹೆಮಾನ್ ನಾನು ಮಂಗಳೂರಿನ ಬಂಟ್ವಾಳ ಮೂಲದವನಾಗಿದ್ದೇನೆ.

ನಾನು ಮಂಗಳೂರಿನ ಹಳ್ಳಿಗಳಲ್ಲಿ ಜನರಿಂದ ಬೀಡಿ ಕಟ್ಟಿಸಿ, ನಂತರ ಪ್ರೀತಿ ಕಂಪೆನಿ ಹೆಸರಿನ ನಕಲಿ ಲೇಬಲ್ ಗಳನ್ನು ಹಾಕಿ ಬೀಡಿ ಬಂಡಲ್ ಗಳನ್ನು ಹಾಕಿ ನಂತರ ಬೆಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದೇನೆ ಎಂದು ಹೇಳಿರುತ್ತಾನೆ. ಈ ನಕಲಿ ಬೀಡಿ ಮಾರಾಟ ದಿಂದ ಪ್ರತಿಷ್ಠಿತ ಪ್ರೀತಿ ಕಂಪೆನಿಯ ವ್ಯವಹಾರ ಗಳಲ್ಲಿ ನಷ್ಟ ಸಂಭವಿಸಿದ್ದು, ಈತನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಪ್ರೀತಿ ಬೀಡಿ ಕಂಪೆನಿಯವರು ಬೆಂಗಳೂರು ನಗರ ಆರ್ ಎಂ ಸಿ ಯಾರ್ಡ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!