Saturday, September 26, 2026
spot_imgspot_img
spot_imgspot_img

ಸತತ ಎರಡನೇ ಬಾರಿ ಕಬಡ್ಡಿ ವಿಶ್ವಕಪ್‌ ಮುಡಿಗೇರಿಸಿಕೊಂಡ ಭಾರತ ಮಹಿಳಾ ತಂಡ!

- Advertisement -
- Advertisement -

ಭಾರತೀಯ ತಂಡದಲ್ಲಿ ಮಿಂಚಿದ ಮಂಗಳೂರಿನ ಕುವರಿ ಧನಲಕ್ಷ್ಮೀ ಪೂಜಾರಿ

ಬಾಂಗ್ಲಾದೇಶದ ಢಾಕಾದಲ್ಲಿ ನಡೆದ 2025ರ ಮಹಿಳಾ ಕಬಡ್ಡಿ ವಿಶ್ವಕಪ್​​ ಟೂರ್ನಿಯಲ್ಲಿ ಚೈನೀಸ್ ತೈಪೆ ತಂಡವನ್ನು 35-28 ಅಂಕಗಳ ಅಂತರದಲ್ಲಿ ಸೋಲಿಸುವ ಮೂಲಕ ಭಾರತ ತಂಡ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಭಾರತೀಯ ಮಹಿಳಾ ತಂಡ ಎರಡನೇ ಭಾರಿ ಕಬಡ್ಡಿ ವಿಶ್ವಕಪ್ ಗೆದ್ದಿದೆ.

2012ರಲ್ಲಿ ಬಿಹಾರದಲ್ಲಿ ಕೊನೆಯ ಬಾರಿ ವಿಶ್ವಕಪ್​​ ಪಂದ್ಯ ನಡೆದಿತ್ತು. ಆ ಬಳಿಕ 13 ವರ್ಷಗಳ ನಂತರ ಎರಡನೇ ಆವೃತ್ತಿಯ ಮಹಿಳೆಯರ ವಿಶ್ವಕಪ್​​ ಟೂರ್ನಿ ಆಯೋಜಿಸಲಾಗಿತ್ತು. ಮೊದಲ ಆವೃತ್ತಿಯಲ್ಲಿ ಕೂಡ ಭಾರತ ತಂಡ ಚಾಂಪಿಯನ್​ ಆಗಿತ್ತು.

ಭಾರತೀಯ ಕಬಡ್ಡಿ ತಂಡದಲ್ಲಿ ಮಂಗಳೂರಿನ ಕುವರಿ ಧನಲಕ್ಷ್ಮೀ ಪೂಜಾರಿ ಪ್ರತಿನಿಧಿಸಿ, ಕರ್ನಾಟಕ ಹಾಗೂ ದಕ್ಷಿಣಕನ್ನಡ ಜಿಲ್ಲೆಗೆ ಹೆಮ್ಮೆ ತಂದಿದ್ದಾರೆ. ಸುರತ್ಕಲ್‌ನ ಇಡ್ಯಾ ನಿವಾಸಿ ನಾರಾಯಣ ಪೂಜಾರಿ ಮತ್ತು ಶಶಿಕಲಾ ದಂಪತಿಯ ಪುತ್ರಿಯಾಗಿದ್ದಾರೆ. ಇದುವರೆಗೆ 12 ಬಾರಿ ರಾಜ್ಯವನ್ನು ಪ್ರತಿನಿಧಿಸಿದ್ದರು. ಜೂನಿಯರ್, ಸೀನಿಯರ್, ಖೇಲೋ ಇಂಡಿಯಾ ಸ್ಪರ್ಧೆಯಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಿದ್ದಾರೆ.

- Advertisement -

Related news

error: Content is protected !!