Thursday, July 23, 2026
spot_imgspot_img
spot_imgspot_img

ಸಾಮಾಜಿಕ ಜಾಲತಾಣದಲ್ಲಿ ಮಾನಹಾನಿ ಪೋಸ್ಟರ್ ಹಾಕಿ ಪ್ರಚಾರ

- Advertisement -
- Advertisement -

ಕಿಡಿಗೇಡಿಗಳ ವಿರುದ್ದ ಸೂಕ್ತ ತನಿಖೆ ನಡೆಸುವಂತೆ ಆಶಾ ತಿಮ್ಮಪ್ಪ ಗೌಡರಿಂದ ಠಾಣೆಗೆ ದೂರು

ಕಡಬ: ವಿಧಾನ ಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದದಿಂದ ಅಭ್ಯರ್ಥಿಯಾಗಿ ಕಣಕ್ಕಿಳಿದ ಬಿಜೆಪಿ ಯ ಹಿರಿಯ ಕಾರ್ಯಕರ್ತೆ ಆಶಾ ತಿಮ್ಮಪ್ಪ ಗೌಡರವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್‌ ಹಾಕಿರುವವರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಕಡಬ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ವೈರಲ್‌ ಆಗುತ್ತಿರುವ ಭಾವಚಿತ್ರ 👇

ಕಳೆದ ಎರಡು ದಿನಗಳ ಹಿಂದೆ ದೇಶದ ಪ್ರಧಾನಿ ನರೇಂದ್ರ ಮೋದಿಯರವರು ಉಡುಪಿಗೆ ಬಂದಾಗ ವಿಮಾನ ನಿಲ್ದಾಣದಲ್ಲಿ ನನಗೂ ಅವರನ್ನು ನೋಡುವ ಭಾಯ ಸಿಗಬಹುದು ಅಂದುಕೊಂಡಿದ್ದೆ. ಆದರೆ ಈಗ ನಾನು ಪಕ್ಷಕ್ಕೆ ಬೇಡವಾಗಿದ್ದೇನೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಹರಿಯಬಿಟ್ಟಿದ್ದಾರೆ. ದುರುದ್ದೇಶದಿಂದ ಮಾನಹಾನಿ ಪೋಸ್ಟರ್‌ನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಮಾಡಿರುವ ಕಿಡಿಗೇಡಿಗಳ ವಿರುದ್ಧ ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವಂತೆ ಆಶಾ ತಿಮ್ಮಪ್ಪ ಗೌಡ ಕಡಬ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

- Advertisement -

Related news

error: Content is protected !!