Tuesday, July 21, 2026
spot_imgspot_img
spot_imgspot_img

ಕರ್ನಾಟಕ ಜರ್ನಲಿಸ್ಟ್‌ ಯೂನಿಯನ್‌ (ರಿ) ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಮಹಾಸಭೆ-ನೂತನ ಜಿಲ್ಲಾಧ್ಯಕ್ಷರಾಗಿ ಈಶ್ವರ ವಾರಣಾಶಿ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಜ್ಯೋತಿ ಪ್ರಕಾಶ್ ಪುಣಚ ಆಯ್ಕೆ

- Advertisement -
- Advertisement -

ಪುತ್ತೂರು: ಕರ್ನಾಟಕ ಜರ್ನಲಿಸ್ಟ್‌ ಯೂನಿಯನ್‌ (ರಿ) ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಮಹಾಸಭೆ ಪುತ್ತೂರು ದರ್ಬೆ ಪ್ರಶಾಂತ್‌ ಮಹಲ್‌ ಸಭಾಂಗಣದಲ್ಲಿ ನಡೆಯಿತು.

ಜಿಲ್ಲಾಧ್ಯಕ್ಷರಾದ ತಾರನಾಥ ಗಟ್ಟಿ ಇವರ ಸಭಾಧ್ಯಕ್ಷತೆಯಲ್ಲಿ ನಡೆದ ಮಹಾಸಭೆಯಲ್ಲಿ ಕರ್ನಾಟಕ ಜರ್ನಲಿಸ್ಟ್‌ ಯೂನಿಯನ್‌ (ರಿ) ದಕ್ಷಿಣ ಕನ್ನಡ ಜಿಲ್ಲಾ ಗೌರವಾಧ್ಯಕ್ಷರಾದ ಹರೀಶ್‌ ಬಂಟ್ವಾಳ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕ್ಯಾನುಟ್ ಜೆ ಪಿಂಟೊ, ಕರ್ನಾಟಕ ಜರ್ನಲಿಸ್ಟ್‌ ಯೂನಿಯನ್ ಪುತ್ತೂರು ತಾಲೂಕು ಅಧ್ಯಕ್ಷರಾದ ರಾಮ್‌ದಾಸ್ ಶೆಟ್ಟಿ, ಕರ್ನಾಟಕ ಜರ್ನಲಿಸ್ಟ್‌ ಯೂನಿಯನ್‌ ಸುಳ್ಯ ತಾಲೂಕು ಅಧ್ಯಕ್ಷರಾದ ಯಶ್ವಿತ್‌ ಕಾಳಮನೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಭೆಯಲ್ಲಿ ಸದಸ್ಯರಿಗೆ ಅಪಘಾತ ವಿಮೆಯ ಬಗ್ಗೆ ಮಾಹಿತಿ ನೀಡಲಾಯಿತು. ಸಂಘದ ಮುಂದಿನ ಯೋಜನೆ-ಯೋಚನೆಗಳ ಬಗ್ಗೆ ಚರ್ಚಿಸಲಾಯಿತು. ತಾಲೂಕು ಹಾಗೂ ಜಿಲ್ಲಾ ಸಮಿತಿಯ ಪದಾಧಿಕಾರಿಗಳಿಗೆ ಗುರುತಿನ ಚೀಟಿ ವಿತರಿಸಲಾಯಿತು.

ಬಳಿಕ ಮುಂದಿನ ಎರಡು ವರ್ಷಗಳ ಅವಧಿಗೆ ಅಧ್ಯಕ್ಷ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.

ಅಶ್ವಿನಿ ಪೆರುವಾಯಿಯವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಗಿ, ಪುತ್ತೂರು ತಾಲೂಕು ಅಧ್ಯಕ್ಷರಾದ ರಾಮ್‌ದಾಸ್ ಶೆಟ್ಟಿ ಯವರು ಸ್ವಾಗತಿಸಿದರು. ಜ್ಯೋತಿ ಪ್ರಕಾಶ್ ಪುಣಚ ಧನ್ಯವಾದಗೈದರು. ಸಭೆಯಲ್ಲಿ ಜಿಲ್ಲಾ ಹಾಗೂ ತಾಲೂಕು ಕರ್ನಾಟಕ ಜರ್ನಲಿಸ್ಟ್‌ ಯೂನಿಯನ್‌ ನ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು.

ನೂತನ ಜಿಲ್ಲಾ ಅಧ್ಯಕ್ಷರಾಗಿ ಈಶ್ವರ ವಾರಣಾಶಿ (ಸುಳ್ಯ ಸುದ್ದಿ), ಗೌರವಾಧ್ಯಕ್ಷರಾಗಿ ಸುಳ್ಯ ಸುದ್ದಿ ಸಂಪಾದಕರಾದ ಹರೀಶ್‌ ಬಂಟ್ವಾಳ, ಗೌರವ ಸಲಹೆಗಾರರಾಗಿ ತಾರನಾಥ ಗಟ್ಟಿ, ಪ್ರಧಾನ ಕಾರ್ಯದರ್ಶಿಯಾಗಿ ಜ್ಯೋತಿ ಪ್ರಕಾಶ್ ಪುಣಚ, ಉಪಾಧ್ಯಕ್ಷರನ್ನಾಗಿ ರಾಮ್‌ದಾಸ್‌ ಶೆಟ್ಟಿ ವಿಟ್ಲ ( Vtv), ಶಿವಪ್ರಸಾದ್‌ ಅಲೆಟ್ಟಿ (ಸುದ್ದಿ ಸುಳ್ಯ), ಕೋಶಾಧಿಕಾರಿಯಾಗಿ ಕ್ಯಾನುಟ್ ಪಿಂಟೊ, ಸಂಘಟನಾ ಕಾರ್ಯದರ್ಶಿಯಾಗಿ ಚಿನ್ಮಯಕೃಷ್ಣ (ನಿಖರ ನ್ಯೂಸ್), ರಮೇಶ್ ನೀರಬಿದಿರೆ (ಸುದ್ದಿ ಸುಳ್ಯ) ಹಾಗೂ ಕಾರ್ಯದರ್ಶಿಗಳಾಗಿ ಡೊನಾಲ್ಡ್ ಪಿರೇರಾ, ಜಯಶ್ರೀ ಕೊಯ್‌ಂಗೋಡು (ಸುದ್ದಿ ಸುಳ್ಯ) , ಹಾಗೂ ನಿಮಿತಾ ದಿಲೀಪ್‌ (ಸುದ್ದಿ ಪುತ್ತೂರು) ರವರನ್ನು ಮತ್ತು ಜಿಲ್ಲಾ ಪದಾದಿಕಾರಿಗಳನ್ನು ಆಯ್ಕೆ ಮಾಡಲಾಯಿತು.

- Advertisement -

Related news

error: Content is protected !!