Monday, July 20, 2026
spot_imgspot_img
spot_imgspot_img

ಮಹಿಳಾ ಕಬಡ್ಡಿ ವಿಶ್ವಕಪ್‌ನಲ್ಲಿ ಚಿನ್ನ ಗೆದ್ದ ರಾಜ್ಯದ ಆಟಗಾರ್ತಿ ಧನಲಕ್ಷ್ಮಿ ಪೂಜಾರಿಗೆ ಅಭಿನಂದಿಸಿದ ಸಿಎಂ

- Advertisement -
- Advertisement -

ಬೆಳಗಾವಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಢಾಕಾದಲ್ಲಿ ನಡೆದ ಮಹಿಳಾ ಕಬಡ್ಡಿ ವಿಶ್ವಕಪ್ ಪಂದ್ಯಾವಳಿಯಲ್ಲಿ ಚಿನ್ನ ಗೆದ್ದ ಭಾರತ ತಂಡದಲ್ಲಿರುವ ರಾಜ್ಯದ ಆಟಗಾರ್ತಿ ಧನಲಕ್ಷ್ಮಿ ಪೂಜಾರಿ ಅವರಿಗೆ ಸುವರ್ಣಸೌಧದ ವಿಧಾನಸಭಾ ಅಧಿವೇಶನದಲ್ಲಿ ಅಭಿನಂದಿಸಿದರು.

ಅಧಿವೇಶನ ವೀಕ್ಷಣೆಗೆ ಬಂದಿದ್ದ ಧನಲಕ್ಷ್ಮಿ ಪೂಜಾರಿ ಮತ್ತು ಇವರ ತರಬೇತುದಾರರನ್ನು ಸ್ವಾಗತಿಸಿ ಅಭಿನಂಧನಾ ನುಡಿಗಳನ್ನು ಆಡಿದರು. ಈಗಾಗಲೇ ಸರ್ಕಾರ ಧನಲಕ್ಷ್ಮಿ ಅವರಿಗೆ ಐದು ಲಕ್ಷ ನಗದು‌ ನೀಡಿ ಪ್ರತಿಭೆಯನ್ನು ಗೌರವಿಸಿರುವುದನ್ನು ಮುಖ್ಯಮಂತ್ರಿಗಳು ಸ್ಮರಿಸಿ ಅಭಿನಂದಿಸಿದರು.

- Advertisement -

Related news

error: Content is protected !!