

ಬೆಂಗಳೂರು: ಟ್ರೆಕ್ಕಿಂಗ್ ವೇಳೆ ಈಜಲು ಹೋದ ಟೆಕ್ಕಿ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿರುವ ಘಟನೆ ಬೆಂಗಳೂರು ಹೊರವಲಯ ಜಿಗಣಿ ಬಳಿಯ ಯಲ್ಲಮ್ಮನ ದೊಡ್ಡಯ್ಯ ಕಲ್ಲು ಕ್ವಾರಿಯಲ್ಲಿ ನಡೆದಿದೆ.
ಆಂಧ್ರ ಪ್ರದೇಶ ಮೂಲದ ವಿನಯ್ (30) ನಾಪತ್ತೆಯಾದ ಟೆಕ್ಕಿ. ಸಾಫ್ಟ್ವೇರ್ ಉದ್ಯೋಗಿಯಾಗಿದ್ದ ವಿನಯ್ ಬೆಂಗಳೂರಿನ ಹಲಸೂರಿನಲ್ಲಿ ವಾಸವಿದ್ದರು. ಶುಕ್ರವಾರ ಗಾಂಧಿ ಜಯಂತಿ ರಜೆ ಹಿನ್ನೆಲೆ ಟ್ರೆಕ್ಕಿಂಗ್ ಪ್ಲ್ಯಾನ್ ಮಾಡಿದ್ದು, ಬಿಎಲ್ಆರ್ ಹೈಕ್ ಎಂಬ ಇನ್ಸ್ಟಾ ಗ್ರೂಪ್ ಮೂಲಕ ಎಂಟು ಜನರ ತಂಡ ಟ್ರೆಕ್ಕಿಂಗ್ ತೆರಳಿದ್ದರು.
ಸಂಜೆ 5:30ರ ವೇಳೆಗೆ ಕಲ್ಲು ಕ್ವಾರಿಯ ನೀರಿನಲ್ಲಿ ಈಜಲು ತೆರಳಿದ್ದಾರೆ. ಈಜಾಡುತ್ತಿದ್ದ ವೇಳೆ ನೀರಿನಲ್ಲಿ ವಿನಯ್ ನೀರಿನಲ್ಲಿ ಮುಳುಗಿದ್ದಾರೆ. ಉಳಿದವರು ನೀರಿನಿಂದ ಹೊರಬಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಜಿಗಣಿ ಪೋಲಿಸರು ಸ್ಥಳಕ್ಕೆ ಭೇಟಿ ನಿಡಿದ್ದಾರೆ. ಅಗ್ನಿಶಾಮಕ ತಂಡ ಸ್ಥಳಕ್ಕೆ ಭೇಟಿ ನೀಡಿ ಹುಡುಕಾಟ ನಡೆಸಿದ್ದಾರೆ. ಅಗ್ನಿಶಾಮಕ ತಂಡ ಶುಕ್ರವಾರ ಸಂಜೆಯಿಂದ ವಿನಯ್ಗಾಗಿ ಹುಡುಕಾಡುತ್ತಿದೆ. ಘಟನಾ ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸದ್ಯ ಟೆಕ್ಕಿ ವಿನಯ್ಗಾಗಿ ಶೋಧಕಾರ್ಯ ಮುಂದುವರಿದಿದೆ.








