Wednesday, July 22, 2026
spot_imgspot_img
spot_imgspot_img

ಅಕ್ರಮ ಕಾಫ್ ಸಿರಪ್ ತಯಾರಿಕೆ ಮತ್ತು ಮಾರಾಟ ಪ್ರಕರಣ – ಮೂರು ರಾಜ್ಯಗಳ 25 ಸ್ಥಳಗಳಲ್ಲಿ ಏಕಕಾಲದಲ್ಲಿ ED ದಾಳಿ

- Advertisement -
- Advertisement -

ಹೊಸದಿಲ್ಲಿ: ಕೋಡಿನ್ ಆಧಾರಿತ ಕೆಮ್ಮಿನ ಸಿರಪ್‌ನ ತಯಾರಿಕೆ ಮತ್ತು ಮಾರಾಟದ ಬೃಹತ್ ಅಕ್ರಮ ಜಾಲಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಡಿ.12ರಂದು ಉತ್ತರ ಪ್ರದೇಶ, ಜಾರ್ಖಂಡ್ ಮತ್ತು ಗುಜರಾತ್ ರಾಜ್ಯಗಳ ಆರು ನಗರಗಳಲ್ಲಿಯ 25 ಸ್ಥಳಗಳ ಮೇಲೆ ಏಕಕಾಲದಲ್ಲಿ ದಾಳಿಗಳನ್ನು ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದರು.

ಲಕ್ಕೋದಲ್ಲಿ ಅಮಾನತುಗೊಂಡಿರುವ ಪೋಲಿಸ್ ಕಾನ್‌ಸ್ಟೇಬಲ್ ಮತ್ತು ಇತರ ನಾಲ್ವರ ನಿವಾಸಗಳ ಮೇಲೆ ದಾಳಿಗಳನ್ನು ನಡೆಸಲಾಗಿದೆ. ದುಬೈನಿಂದ ಈ ಜಾಲವನ್ನು ನಿರ್ವಹಿಸುತ್ತಿದ್ದಾನೆ ಎನ್ನಲಾಗಿರುವ ಪ್ರಮುಖ ರೂವಾರಿ ಶುಭಂ ಜೈಸ್ವಾಲ್ ಗೆ ಸೇರಿದ ವಾರಣಾಸಿಯಲ್ಲಿನ ಎರಡು ಮನೆಗಳ ಮೇಲೂ ದಾಳಿಗಳು ನಡೆದಿವೆ. ರಾಂಚಿ ಮತ್ತು ಅಹ್ಮದಾಬಾದ್‌ನಲ್ಲಿ ಅಬಟ್ ಫಾರ್ಮಾಸ್ಯುಟಿಕಲ್ಸ್ ಇತರ ಹಲವಾರು ಸಂಸ್ಥೆಗಳು ಮತ್ತು ಎರಡು ಪ್ರಮುಖ ಔಷಧಿ ತಯಾರಿಕೆ ಕಂಪನಿಗಳ ಕಚೇರಿಗಳ ಮೇಲೂ ದಾಳಿಗಳನ್ನು ನಡೆಸಲಾಗಿದೆ. ಸಹಾರನ್ ಪುರ ಮತ್ತು ಘಾಝಿಯಾಬಾದ್‌ನಲ್ಲೂ ದಾಳಿಗಳು ನಡೆದಿವೆ. ದಾಳಿ ಸಂದರ್ಭ ಹಲವಾರು ದಾಖಲೆಗಳು, ಮೊಬೈಲ್ ಫೋನ್‌ಗಳು ಮತ್ತು ಹಲವಾರು ಕಡತಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

- Advertisement -

Related news

error: Content is protected !!