Tuesday, July 28, 2026
spot_imgspot_img
spot_imgspot_img

ಬೆಂಗಳೂರು: ನಿರ್ಮಾಣ ಹಂತದ ಕಟ್ಟಡದಿಂದ ಇಟ್ಟಿಗೆ ಬಿದ್ದು ಮಗು ಮೃತ್ಯು..!

- Advertisement -
- Advertisement -

ಬೆಂಗಳೂರು: ನಿರ್ಮಾಣ ಹಂತದ ಕಟ್ಟಡದಿಂದ ಇಟ್ಟಿಗೆ ಬಿದ್ದು ನಾಲ್ಕು ವರ್ಷ ಮಗು ಸಾವನಪ್ಪಿ ಮೂವರು ಗಂಭೀರ ಗಾಯಗೊಂಡ ಘಟನೆ ಎಚ್‌ಎಎಲ್‌ ಪೊಲೀಸ್ ಠಾಣಾ ವ್ಯಾಪ್ತಿಯ ಚಿನ್ನಪ್ಪನಹಳ್ಳಿಯಲ್ಲಿ ನಡೆದಿದೆ.

ಮೃತರನ್ನು ಶ್ರೀಶೈಲ್‌ ಎಂಬುವವರ ಪುತ್ರಿ ಮನುಶ್ರೀ ಎಂದು ಗುರುತಿಸಲಾಗಿದೆ. ಗಾಯಾಳು ಶ್ರೀಯಾನ್‌ (6), ಶೇಖರ್(5) ಹಾಗೂ ಮಮತಾ (30) ಎಂಬವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ನಿರ್ಮಾಣ ಹಂತದ ಕಟ್ಟಡದ ಪಕ್ಕದಲ್ಲಿ ಸಿಮೆಂಟ್ ಶೀಟ್​​ನ ಶೆಡ್‌ನಲ್ಲಿ ವಿಜಯಪುರ ಜಿಲ್ಲೆ ಸಿಂಧಗಿಯ ಕುಟುಂಬವು ವಾಸವಿತ್ತು. ನಿರ್ಮಾಣ ಹಂತದ ಕಟ್ಟಡವು ಶ್ರೀನಿವಾಸುಲು ಅವರಿಗೆ ಸೇರಿದೆ. 4ನೇ ಮಹಡಿ ಮೇಲಿಂದ ಸುಮಾರು 10ರಿಂದ 12 ಸಿಮೆಂಟ್ ಇಟ್ಟಿಗೆಗಳು ಕೆಳಕ್ಕೆ ಬಿದ್ದಿವೆ. ಇಟ್ಟಿಗೆ ಬಿದ್ದ ರಭಸಕ್ಕೆ ಶೆಡ್‌ನಲ್ಲಿದ್ದ ಮಗು ಮೃತಪಟ್ಟು, ಮೂವರು ಗಾಯಗೊಂಡಿದ್ದಾರೆ. ಶೆಡ್‌ನ ಶೀಟ್‌ ಸಂಪೂರ್ಣ ಧ್ವಂಸವಾಗಿದೆ.

- Advertisement -

Related news

error: Content is protected !!