Wednesday, July 22, 2026
spot_imgspot_img
spot_imgspot_img

ಹೊಸದಿಲ್ಲಿ: ದಟ್ಟ ಮಂಜು ಮುಸುಕುವ ಮುನ್ಸೂಚನೆ ಹಿನ್ನೆಲೆ ಹಲವು ವಿಮಾನ ರದ್ದುಪಡಿಸಿದ ಇಂಡಿಗೊ

- Advertisement -
- Advertisement -

ಹೊಸದಿಲ್ಲಿ: ದೇಶದ ಹಲವು ವಿಮಾನ ನಿಲ್ದಾಣಗಳಲ್ಲಿ ಪ್ರತಿಕೂಲ ಹವಾಮಾನ ಹಾಗೂ ದಟ್ಟ ಮಂಜು ಮುಸುಕುವ ಮುನ್ಸೂಚನೆ ಹಿನ್ನೆಲೆಯಲ್ಲಿ ಇಂಡಿಗೊ ವಿಮಾನಯಾನ ಸಂಸ್ಥೆ ರವಿವಾರ 13 ವಿಮಾನಗಳ ಸಂಚಾರವನ್ನು ರದ್ದುಪಡಿಸಿದೆ.

ಚಂಡೀಗಢ, ಮುಂಬೈ, ಅಹ್ಮದಾಬಾದ್, ಹೈದ್ರಾಬಾದ್, ಬೆಂಗಳೂರು, ಅಮೃತಸರ, ದೆಹಲಿ, ಗಯಾ, ಕೊಲ್ಕತ್ತಾ, ಚೆನ್ನೈ, ಜೈಪುರ ಮತ್ತು ಪುಣೆ ನಗರಗಳಿಗೆ ಸಂಪರ್ಕ ಕಲ್ಪಿಸುವ ವಿಮಾನಗಳ ಸೇವೆಯಲ್ಲಿ ವ್ಯತ್ಯಯವಾಗಲಿವೆ ಎಂದು ಪ್ರಕಟಿಸಿದೆ.

ಹಲವು ವಿಮಾನ ನಿಲ್ದಾಣಗಳಲ್ಲಿ ಪ್ರತಿಕೂಲ ಹವಾಮಾನದ ಕಾರಣ ನೀಡಿ ಇಂಡಿಗೊ ಶನಿವಾರ 57 ವಿಮಾನಗಳನ್ನು ರದ್ದುಪಡಿಸಿತ್ತು. ಪೈಲಟ್ ಗಳ ಕೆಲಸದ ಅವಧಿ ಮತ್ತು ವಿಶ್ರಾಂತಿಗೆ ಸಂಬಂಧಿಸಿದಂತೆ ಕಟ್ಟುನಿಟ್ಟಿನ ನಿಯಮ ಜಾರಿಗೊಳಿಸಿ, ಹಲವು ವಿಮಾನಗಳ ಸೇವೆಯನ್ನು ರದ್ದುಪಡಿಸಿದ್ದ ಇಂಡಿಗೊ ಇದೀಗ ಪ್ರತಿಕೂಲ ಹವಾಮಾನದ ಕಾರಣ ನೀಡಿ ಸೇವೆ ರದ್ದುಪಡಿಸಿದೆ.

- Advertisement -

Related news

error: Content is protected !!