- Advertisement -
- Advertisement -





ಓಡಿಲ್ನಾಳ: ಗ್ರಾಮದ ಕಟ್ಟಡ ಬೈಲ್ ನಿವಾಸಿ ಮಂಜುನಾಥ ನಾಯಕ್ (42ವ) ಅವರು ಮನೆಯ ಕೊಠಡಿಯ ಒಳಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಜ.1ರಂದು ನಡೆದಿದ್ದು, ಮರಣೋತ್ತರ ಪರೀಕ್ಷೆಗಾಗಿ ಶವವನ್ನು ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಮೃತರು ತಂದೆ ಗೋಪಾಲ್ ನಾಯಕ್, ತಾಯಿ, ಪತ್ನಿ ಮತ್ತು ಮಕ್ಕಳನ್ನು ಅಗಲಿದ್ದಾರೆ. ಪ್ರಕರಣ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
- Advertisement -








