



ವಿಟ್ಲ : ಶ್ರೀ ಪಂಚಲಿಂಗೇಶ್ವರ ದೇವರ ಕಾಲಾವಧಿ ಜಾತ್ರೆಯ ಅಂಗವಾಗಿ, ಸಮರ್ಪಣ್ ವಿಟ್ಲ ಇವರ ವತಿಯಿಂದ ಜನವರಿ 16ರಂದು ನಡೆಯಲಿರುವ ಸಮರ್ಪಣ್ ಕಲೋತ್ಸವ–2026 ಸಾಂಸ್ಕೃತಿಕ ಕಾರ್ಯಕ್ರಮ, ಸಾಧಕರಿಗೆ ಗೌರವಾರ್ಪಣೆ ಹಾಗೂ ಸಮರ್ಪಣ್ ವಿದ್ಯಾನಿಧಿ ವಿತರಣೆ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಲಾಯಿತು. ಆಮಂತ್ರಣ ಪತ್ರಿಕೆಯನ್ನು ವಿಟ್ಲದ ಹಿರಿಯ ಸ್ವಯಂಸೇವಕರಾದ ಈಶ್ವರ ಡಿ. ಕೂಜಪ್ಪಾಡಿ ಅವರು ಬಿಡುಗಡೆ ಮಾಡಿದರು.
ಈ ಸಂದರ್ಭ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀ ನಾರಾಯಣ ಪ್ರಸಾದ್ ಬನ್ನಿಂತಾಯ ಅವರು ಪ್ರಾರ್ಥನೆ ನೆರವೇರಿಸಿದರು.
ಜ.16ರಂದು ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ, ಚೈತನ್ಯ ಕಲಾವಿದರು ಬೈಲೂರು ಇವರಿಂದ ರಾಘು ಮಾಸ್ಟ್ರು ಎಂಬ ಹಾಸ್ಯಮಯ ತುಳು ನಾಟಕವು ವಿಶೇಷ ದೃಶ್ಯ ಸಂಯೋಜನೆಯೊಂದಿಗೆ ಪ್ರದರ್ಶನಗೊಳ್ಳಲಿದೆ. ಜೊತೆಗೆ ಸಾಧಕರಿಗೆ ಗೌರವಾರ್ಪಣೆ ಹಾಗೂ ವಿದ್ಯಾನಿಧಿ ವಿತರಣೆ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಸಮರ್ಪಣ್ ವಿಟ್ಲ ಅಧ್ಯಕ್ಷರಾದ ಯಶವಂತ ಎನ್, ಗೌರವಾಧ್ಯಕ್ಷರಾದ ಕೃಷ್ಣಯ್ಯ ಕೆ (ವಿಟ್ಲ ಅರಮನೆ), ಉಪಾಧ್ಯಕ್ಷರಾದ ಯಾದವ ಮಡಿವಾಳಕೋಡಿ, ಸೂರಜ್ ಕೋಟ್ಯಾನ್, ರವಿವರ್ಮ (ವಿಟ್ಲ ಅರಮನೆ), ಕಾರ್ಯದರ್ಶಿ ರೋಹಿತ್ ಕಟ್ಟೆ, ಕೋಶಾಧಿಕಾರಿ ನಿಖಿಲ್ ಸಾಲ್ಯಾನ್, ಗೌರವ ಸಲಹೆಗಾರರಾದ ಮೋನಪ್ಪ ಗೌಡ (ಶಿವಾಜಿನಗರ), ವಿಶ್ವನಾಥ ನಾಯ್ತೋಟ್ಟು, ಸಂಘಟನಾ ಕಾರ್ಯದರ್ಶಿ ರವಿಶಂಕರ್, ಸಂಚಾಲಕ ಹರೀಶ್ ಕೆ. ವಿಟ್ಲ ಸೇರಿದಂತೆ ಸಮರ್ಪಣ್ ವಿಟ್ಲದ ಸದಸ್ಯರು ಹಾಗೂ ಗಣ್ಯರು ಉಪಸ್ಥಿತರಿದ್ದರು.








