Tuesday, July 21, 2026
spot_imgspot_img
spot_imgspot_img

ಬಂಟ್ವಾಳ: ದ.ಕ.ಜಿ.ಪಂ.ಹಿರಿಯ ಪ್ರಾಥಮಿಕ ಶಾಲೆ ನೆಟ್ಲ ದಲ್ಲಿ 2025-26ನೇ ಸಾಲಿನ ಕಲ್ಲಡ್ಕ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ ಕಾರ್ಯಕ್ರಮ

- Advertisement -
- Advertisement -

ಬಂಟ್ವಾಳ: ದ.ಕ.ಜಿ.ಪಂ.ಹಿರಿಯ ಪ್ರಾಥಮಿಕ ಶಾಲೆ ನೆಟ್ಲ ಇಲ್ಲಿ 2025-26ನೇ ಸಾಲಿನ ಕಲ್ಲಡ್ಕ ಕ್ಲಸ್ಟರ್ ಮಟ್ಟದ ಬುನಾದಿ ಸಾಕ್ಷರತೆ ಹಾಗೂ ಸಂಖ್ಯಾ ಜ್ಞಾನಕ್ಕೆ ಸಂಬಂಧಿಸಿದ ಕಲಿಕಾ ಹಬ್ಬ ಕಾರ್ಯಕ್ರಮ ಡಿಸೆಂಬರ್ 30 ಮಂಗಳವಾರ ಜರಗಿತು.ಕಾರ್ಯಕ್ರಮವನ್ನು ತಾಲೂಕು ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ಪುರಸ್ಕೃತ ಕಲ್ಲಡ್ಕ ಮಾದರಿ ಶಾಲಾ ಶಿಕ್ಷಕಿ ಸವಿತಾ ಉದ್ಘಾಟಿಸಿದರು.ಅಧ್ಯಕ್ಷತೆಯನ್ನು ನೆಟ್ಲ ಶಾಲಾ ಮುಖ್ಯಮಂತ್ರಿ ಪೂರ್ವಿತ್ ವಹಿಸಿದರು.

ವೇದಿಕೆಯಲ್ಲಿ ಎಸ್.ಡಿ.ಎಂ.ಸಿ.ಉಪಾಧ್ಯಕ್ಷೆ ಭವ್ಯ ಸದಸ್ಯರಾದ ಸುಧಾಕರ ದೇವಾಡಿಗ, ನಳಿನಾಕ್ಷಿ, ಚಂಚಲಾಕ್ಷಿ, , ಶಾಲೆಯ ಮುಖ್ಯ ಶಿಕ್ಷಕಿ ಶೋಭಾಲತಾ,ವಿದ್ಯಾರ್ಥಿ ಪ್ರತಿನಿಧಿಗಳಾದ ಕಲ್ಲಡ್ಕ ಮಾದರಿ ಶಾಲಾ ಸುಹಾನ್ ಎಸ್, ಮಜಿ ಶಾಲಾ ಕುಮಾರಿ ಯಶ್ವಿ, ನೆಟ್ಲ ಶಾಲೆಯ ಕೆ ಕೃತಿ, ಕಾರುಣ್ಯ ಎನ್ ಶಾಲಾ ಶಿಕ್ಷಕರಾದ ಪ್ರವೀಣ್, ಜಯರಾಮ ನಾವಡ, ಉಪಸ್ಥಿತರಿದ್ದರು. ಕಲ್ಲಡ್ಕ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಜ್ಯೋತಿ ಯಾವುದನ್ನು ವಿದ್ಯಾರ್ಥಿಗಳು ಚಟುವಟಿಕೆಗಳ ಮೂಲಕ ಕಲಿಯುತ್ತಾರೋ ಅಲ್ಲಿ ಹೆಚ್ಚು ಸಂತಸದಾಯಕವಾದ ಕಲಿಕೆಯು ಮೂಡುತ್ತದೆ, ಬುನಾದಿ ಸಾಕ್ಷರತೆ ಮತ್ತು ಸಂಖ್ಯಾ ಜ್ಞಾನ ಸಾಧಿಸಲು ಕಲಿಕಾ ಹಬ್ಬಗಳು ಹೆಚ್ಚು ಸಹಕಾರಿಯಾಗಿದೆ ಎಂಬುದಾಗಿ ಪ್ರಸ್ತಾವನೆಗೈದರು. ಕಲಿಕಾ ಹಬ್ಬದ ಚಟುವಟಿಕೆಗಳ ಜೊತೆಗೆ ರಸಪ್ರಶ್ನೆ, ಚಿತ್ರ ಬಂದ, ಒಗಟು ಗಾದೆ ಮಾತು, ಪದಬಂಧ, ಲೆಕ್ಕ ಅಂದ್ರೆ ನನಗಿಷ್ಟ ಎಂಬ ವಿಶೇಷ ಕಾರ್ಯಕ್ರಮಗಳು ನಡೆದವು.

ಸಮಾರೋಪ ಸಮಾರಂಭದಲ್ಲಿ ಬಂಟ್ವಾಳ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಿಂದ ಶಿಕ್ಷಣ ಸಂಯೋಜಕಿ ಪ್ರತಿಮಾ ರವರು ವಿದ್ಯಾರ್ಥಿಗಳ ಕಲಿಕೆಯ ಬಗ್ಗೆ ಸಂತಸ ವ್ಯಕ್ತಪಡಿಸಿದರು ಹಾಗೂ ಮುಕ್ತ ವಾತಾವರಣದಲ್ಲಿ ವಿದ್ಯಾರ್ಥಿಗಳು ಹೆಚ್ಚು ಕಲಿಕೆಯಲ್ಲಿ ತೊಡಗಿಸಿಕೊಂಡಾಗ ಫಲಿತಾಂಶ ಉತ್ತಮವಾಗಿ ಲಭಿಸುತ್ತದೆ ಎಂಬುದಾಗಿ ತಿಳಿಸಿದರು. ಕಲ್ಲಡ್ಕ ಕ್ಲಸ್ಟರ್ ವ್ಯಾಪ್ತಿಯ ವಿವಿಧ ಶಾಲೆಗಳಿಂದ ಶಿಕ್ಷಕರು ಭಾಗವಹಿಸಿ ಚಟುವಟಿಕೆಗಳನ್ನು ನಡೆಸಿಕೊಟ್ಟರು, ಕಲಿಕಾ ಹಬ್ಬದಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳಿಗೆ ಉಡುಗೊರೆ ನೀಡಿ ಗೌರವಿಸಲಾಯಿತು.ನೆಟ್ಲ ಶಾಲೆಯ ಶಿಕ್ಷಕರಾದ ಮಹಮದ್ ಅಖಿಲ್, ನಿಶ್ಮಿತಾ, ಅಶ್ವಿನಿ, ಇಂದಿರಾ, ಸುಮನ, ಹಾಗೂ ರಾಜೇಶ್ ದೇವಾಡಿಗ, ಶಾಲಾಭಿವೃದ್ಧಿ ಸಮಿತಿಯ ಸದಸ್ಯರುಗಳು ಸಹಕರಿಸಿದರು. ನೆಟ್ಲಶಾಲಾ ವಿದ್ಯಾರ್ಥಿನಿ ಗಾಯತ್ರಿ ಎನ್ ಕುಲಾಲ್ ಸ್ವಾಗತಿಸಿ, ದೀಕ್ಷಾ ಎನ್ ವಂದಿಸಿದರು. ಗ್ರೀಷ್ಮ ದೇವಾಡಿಗ ಹಾಗು ವೀಕ್ಷಾ ಕಾರ್ಯಕ್ರಮ ನಿರೂಪಿಸಿದರು.

- Advertisement -

Related news

error: Content is protected !!