Wednesday, July 22, 2026
spot_imgspot_img
spot_imgspot_img

ಚಿಕ್ಕಮಗಳೂರು:ಹೆತ್ತ ಮಗಳನ್ನೇ ವೇಶ್ಯಾವಾಟಿಕೆಗೆ ದೂಡಿದ ತಂದೆ!

- Advertisement -
- Advertisement -

ಚಿಕ್ಕಮಗಳೂರು: ತಾಯಿ ಜೊತೆ ಸೇರಿ ಹಣಕ್ಕಾಗಿ ಹೆತ್ತ ಮಗಳನ್ನೇ ವೇಶ್ಯಾವಾಟಿಕೆಗೆ ತಳ್ಳಿದ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. 16 ವರ್ಷದ ಅಪ್ರಾಪ್ತ ಮಗಳನ್ನ ತಂದೆಯೇ ಮಾರಾಟ ಮಾಡಿ ಮಗಳ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಸಹಕರಿಸಿದ್ದಾನೆ. ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರ ತಾಲೂಕಿನ ನಾಗವಂಗಲ ಗ್ರಾಮದ ಗಿರೀಶ್ ಈ ಕೆಲಸ ಮಾಡಿದ ಪಾಪಿ ತಂದೆ.

6 ವರ್ಷಗಳ ಹಿಂದೆ ಅನಾರೋಗ್ಯದಿಂದ ತಾಯಿ ಸಾವನ್ನಪ್ಪಿದ ಬಳಿಕ ನೊಂದ ಬಾಲಕಿ ಅಜ್ಜಿ-ಅಪ್ಪನ ಜೊತೆ ವಾಸವಿದ್ದಳು. ಹಣಕ್ಕಾಗಿ ಅಪ್ಪ-ಅಜ್ಜಿ ಇಬ್ಬರು ಸೇರಿ ಬ್ರೋಕರ್ ನಾರಾಯಣಸ್ವಾಮಿ ಮೂಲಕ ಮಂಗಳೂರಿನ ಭರತ್ ಶೆಟ್ಟಿ ಮನೆಗೆ ಹೋಗೋಣ ಎಂದು ಕರೆದೊಯ್ದು ಅಲ್ಲೇ ಆಕೆ ಮೇಲೆ ಅಪ್ಪನ ಸಹಕಾರದಿಂದಲೇ ಅತ್ಯಾಚಾರವೆಸಗಿದ್ದಾರೆ. 6 ದಿನಗಳ ಅಂತರದಲ್ಲಿ ಬಾಲಕಿ ಋತುಸ್ರಾವ ಆಗಿದ್ದರೂ ಕೂಡ 8 ರಿಂದ 10 ಜನ ಆಕೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ.

ಬಾಲಕಿ ವಿರೋಧ ವ್ಯಕ್ತಪಡಿಸಿದಾಗ ನಿನ್ನ ಅಪ್ಪ ಹಾಗೂ ಭರತ್ ಶೆಟ್ಟಿಗೆ ಹಣ ನೀಡಿದ್ದೇವೆ ಎಂದಿದ್ದಾರೆ. ಮಂಗಳೂರಿನಿಂದ ಬಂದ ಬಳಿಕ ನೊಂದ ಬಾಲಕಿ ಚಿಕ್ಕಪ್ಪ ಹಾಗೂ ಅತ್ತೆ ಬಳಿ ವಿಷಯ ಹೇಳಿದಾಗ ಬೀರೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಬೀರೂರು ಪೊಲೀಸರು ಅಪ್ಪ ಗಿರೀಶ್, ಅಜ್ಜಿ ನಾಗರತ್ನ, ಬ್ರೋಕರ್ ನಾರಾಯಣ ಸ್ವಾಮಿ, ಮಂಗಳೂರು ಮೂಲದ ಭರತ್ ಶೆಟ್ಟಿ ಹಾಗೂ ದುಷ್ಕೃತ್ಯಕ್ಕೆ ಸಹಕರಿಸಿದ ಮನೆ ಮಾಲೀಕ ಶೇಖರ್ ಸುವರ್ಣ ಬಂಧನದ ಜೊತೆ ಆಕೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಜೀನೆಂದ್ರಾ, ರಾಜೇಂದ್ರ ಹಾಗೂ ಸಿರಾಜ್ ಸೇರಿದಂತೆ ಹಲವರನ್ನೂ ಬಂಧಿಸಿದ್ದಾರೆ.

- Advertisement -

Related news

error: Content is protected !!