- Advertisement -
- Advertisement -



ಸುಬ್ರಹ್ಮಣ್ಯ: ಸುಳ್ಯ ತಾಲೂಕಿನ ಸುಬ್ರಹ್ಮಣ್ಯದ ಕುಲ್ಕುಂದ ಎಂಬಲ್ಲಿ ನದಿಯಲ್ಲಿ ಈಜಲು ತೆರಳಿದ್ದ ಇಬ್ಬರು ಯುವಕರು ನೀರುಪಾಲಾದ ಘಟನೆ ಶನಿವಾರ ಸಂಜೆ ನಡೆದಿದೆ.
ಕೊಲ್ಲಮೊಗ್ರು ನಿವಾಸಿ ಜಯರಾಮ ಅವರ ದೂರಿನಂತೆ, ಅವರ ಸಹೋದರನ ಮಗ ಸುಜಿತ್ (28) ಹಾಗೂ ಗೋಪಾಲ್ ನಾಯರ್ ಅವರ ಮಗ ಹರಿಪ್ರಸಾದ್ (39) ನದಿಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದಾಗ ಇಬ್ಬರ ಮೃತದೇಹಗಳು ನದಿದಡದಲ್ಲಿ ಪತ್ತೆಯಾಗಿವೆ.
ಸ್ಥಳೀಯರಿಂದ ಪಡೆದ ಮಾಹಿತಿಯಂತೆ, ಸುಜಿತ್ ಮತ್ತು ಹರಿಪ್ರಸಾದ್ ಇತರ ಸ್ನೇಹಿತರೊಂದಿಗೆ ನದಿದಡದಲ್ಲಿದ್ದ ವೇಳೆ ಸುಜಿತ್ ಈಜಲು ನೀರಿಗೆ ಇಳಿದಿದ್ದಾನೆ. ಈಜು ಬಾರದ ಕಾರಣ ಆತ ನೀರಿನಲ್ಲಿ ಮುಳುಗಿದ್ದು, ಆತನನ್ನು ರಕ್ಷಿಸಲು ಹರಿಪ್ರಸಾದ್ ನೀರಿಗೆ ಇಳಿದಾಗ ಇಬ್ಬರೂ ನೀರುಪಾಲಾಗಿದ್ದಾರೆ ಎನ್ನಲಾಗಿದೆ.
ಈ ಸಂಬಂಧ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಸಂಖ್ಯೆ 02/2026, ಕಲಂ 194 BNSS ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
- Advertisement -








