- Advertisement -
- Advertisement -



ಕಡಬ: ಕಡಬ ಗ್ರಾಮದ ಸುರಭಿ ಬಾರ್ ಮತ್ತು ರೆಸ್ಟೋರೆಂಟ್ನಲ್ಲಿ ವಿನಾಕಾರಣ ಜಗಳ, ಜಾತಿನಿಂದನೆ ಆರೋಪ ಮೇರೆಗೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಾಲ್ತಾಡು ಗ್ರಾಮ, ಕಡಬ ತಾಲೂಕು ನಿವಾಸಿ ಜಗದೀಶ (28) ದಿನಾಂಕ ಜ. 16ರಂದು ರಾತ್ರಿ ಸುಮಾರು 10.00 ರಿಂದ 10.30 ಗಂಟೆಯ ಮಧ್ಯೆ ಕಡಬ ಗ್ರಾಮದ ಕಳಾರದಲ್ಲಿರುವ ಸುರಭಿ ಬಾರ್ ಮತ್ತು ರೆಸ್ಟೋರೆಂಟ್ನಲ್ಲಿ ಊಟ ಮುಗಿಸಿ ಕ್ಯಾಶ್ ಕೌಂಟರ್ ಹತ್ತಿರ ನಿಂತಿದ್ದಾಗ, ಪರಿಚಯಸ್ಥರಾದ ಅಜಯ್, ಬೇಬಿ ಮತ್ತು ಅನಿಲ್ ಎಂಬವರು ವಿನಾಕಾರಣ ಜಗಳ ಆರಂಭಿಸಿ ಜಾತಿನಿಂದನೆ ಮಾಡುತ್ತಾ, ಕೈಯಿಂದ ಕೆನ್ನೆ, ತಲೆ, ಭುಜ, ಬೆನ್ನಿಗೆ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ದೂರುದಾರರು ದೂರು ನೀಡಿದ್ದಾರೆ. ದೂರಿನ ಅನ್ವಯ ಕಡಬ ಪೊಲೀಸ್ ಠಾಣೆಯಲ್ಲಿ ಠಾಣಾ ಅ.ಕ್ರ: 08/2026. ಕಲಂ: 115(2), 352, 351(3) BNS-2023 & : 3(1), (r), & (S) the Sc & St (Prevention of atrocities) Amendment act-2015. ನಂತೆ ಪ್ರಕರಣದ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
- Advertisement -








