


ವಿಟ್ಲ:ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ವಿಟ್ಲ ಇದರ ವರ್ಷಂಪ್ರತಿ ನಡೆಯುವ ಕಾಲಾವಧಿ ಜಾತ್ರೆಯಲ್ಲಿ ಶ್ರೀ ದೇವರ ಅವಭೃತ ಸ್ನಾನಕ್ಕೆ ಕೊಡಂಗಾಯಿ ಸವಾರಿ ಸಂದರ್ಭದಲ್ಲಿ ನ್ಯೂ ಶೈನ್ ಮ್ಯೂಸಿಕಲ್ ವಿಟ್ಲ ಇವರಿಂದ ಕಡಂಬುವಿನಲ್ಲಿ “ಕಡಂಬೋತ್ಸವ 2026” ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮವನ್ನು ಬಂಟ್ವಾಳ ತಾಲೂಕು ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಮಾಧವ ಮಾವೆ ಉದ್ಘಾಟಿಸಿದರು. ಜಯರಾಮ ರೈ ನೋಟರಿ ವಕೀಲರು, ಡಾ ಗೀತಪ್ರಕಾಶ್, ಅಣ್ಣಪ್ಪ ಸಾಸ್ತಾನ, ಕೇಶವ ರಾಮಕುಂಜ, ಸಂದೇಶ್ ಶೆಟ್ಟಿ ಬಿಕ್ನಾಜೆ, ಬಿ ಕೆ ಸೇಸಪ್ಪ ಬೆದ್ರಕಾಡು, ಸಂದೀಪ್ ವಿಟ್ಲ, ಚಿದಾನಂದ ಸೊರಂಗದಮೂಲೆ, ಕೃಷ್ಣಪ್ಪ ಸಾಲಿಯಾನ್ ಬೆದ್ರಕಾಡು,ರಾಮಣ್ಣ ಪಿಲಿಂಜ, ಸೋಮಪ್ಪ ಸುರುಳಿಮೂಲೆ, ಚೇತನ್ ಕಡಂಬು,ಪುನೀತ್ ಕಡಂಬು, ಪ್ರವೀಣ್ ಜಯ ಕಡಂಬು, ಉದಯ್ ಕೆಳಿಂಜ, ಚೈತನ್ಯ ಚಂದಪ್ಪ ಮತ್ತಿತರರು ಉಪಸ್ಥಿತರಿದ್ದರು.




ಈ ಕಾರ್ಯಕ್ರಮದಲ್ಲಿ ವಿಟ್ಲ ಜೆಸಿಐ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ಕಲಾ ಸೌರಭ, ಜಗದಾಂಬ ಕಲಾವಿದರು ವರಪ್ಪಾದೆ ವಿಟ್ಲ ಇವರಿಂದ ತುಳು ಹಾಸ್ಯಮಯ ನಾಟಕ ‘ಬುಡಿಯರಾಪುಜಿ” ಹಾಗೂ ಭಜನಾ ತಂಡದಿಂದ ಭಜನಾಮೃತವು ನಡೆಯಿತು








