- Advertisement -
- Advertisement -



ಬೆಂಗಳೂರು: ಕೆಆರ್ ಪುರಂನ ಭಟ್ಟರಹಳ್ಳಿ ಸಿಗ್ನಲ್ ಬಳಿ ಹಿಟ್ ಅಂಡ್ ರನ್‌ಗೆ ಡೆಲಿವರಿ ಬಾಯ್ ಬಲಿಯಾಗಿರುವ ಘಟನೆ ನಡೆದಿದೆ.
ನೇಪಾಳ ಮೂಲದ ಸುರೇಂದರ್ ಬಹದ್ದೂರ್ (38) ಮೃತರಾದವರು. ಕಳೆದ ಮೂರು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದ ಸುರೇಂದರ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದು, ಡೆಲಿವರಿ ಕೊಡಲು ತೆರಳುತ್ತಿದ್ದ ವೇಳೆ ಬೆಳಗ್ಗೆ 3:30ರ ಸುಮಾರಿಗೆ ಕಾರೊಂದು ಸ್ಕೂಟಿಗೆ ಢಿಕ್ಕಿಯಾಗಿ ಎಸ್ಕೇಪ್ ಆಗಿದೆ. ಅಪಘಾತದ ಪರಿಣಾಮ ಸುರೇಂದರ್ ಮೃತಪಟ್ಟಿದ್ದಾರೆ.
ಹಿಟ್ ಅಂಡ್ ರನ್ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅಪಘಾತ ಎಸಗಿ ಎಸ್ಕೆಪ್ ಆಗಿರುವ ಕಾರು ಚಾಲಕನಿಗಾಗಿ ಪೋಲಿಸರು ಶೋಧ ನಡೆಸುತ್ತಿದ್ದಾರೆ. ಘಟನೆ ಸಂಬಂಧ ಕೆಆರ್ ಪುರಂ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -








