


ಎಸ್. ಪಿ. ವೈ. ಎಸ್. ಎಸ್. ಯೋಗ ಸಮಿತಿಯ ವತಿಯಿಂದ ದ.ಕ ಜಿಲ್ಲೆಯ ವಿವಿದೆಡೆ 16 ದೇವಾಲಯಗಳಲ್ಲಿ ರಥಸಪ್ತಮಿ ಪ್ರಯುಕ್ತ ಭಾನುವಾರ ಸಾಮೂಹಿಕ 108 ಸೂರ್ಯ ನಮಸ್ಕಾರ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಪ್ರಯುಕ್ತ ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿಯೂ ಶ್ರೀಯುತ ಕೃಷ್ಣಯ್ಯ ವಿಟ್ಲಅರಮನೆ, ದೀಪ ಬೆಳಗಿಸಿ ಉದ್ಘಾಟಿಸಿದರು. ಶ್ರೀಮತಿ ಮಾಧುರಿ ಜಿಲ್ಲಾ ಸಹ ಸಂಚಾಲಕರು, ಶ್ರೀಯುತ ಪ್ರಕಾಶ ಅಣ್ಣಡ್ಕ ಸಂಚಾಲಕರು ವಿಟ್ಲ ನಗರ, ಶ್ರೀಯತ ಪ್ರಕಾಶ ನಾಯಕ್ ಸಂಘಟನಾ ಪ್ರಮುಖರು ವಿಟ್ಲ ನಗರ,ಶ್ರೀಮತಿ ರೇವತಿ ಲೆಕ್ಕಪತ್ರ ಪ್ರಮುಖರು, ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮುಂಜಾನೆ 4:30ಕ್ಕೆ ಭಜನೆಯೊಂದಿಗೆ ಆರಂಭವಾದ ಕಾರ್ಯಕ್ರಮ 3 ಹಂತಗಳಲ್ಲಿ 108 ಸೂರ್ಯ ನಮಸ್ಕಾರ ಬೆಳಗ್ಗೆ 7:00 ಗಂಟೆಗೆ ಸಮಾಪನಗೊಂಡಿತು. ರಥಸಪ್ತಮಿಯಂದು ಸೂರ್ಯನಮಸ್ಕಾರ ಮಹತ್ವದ ಭೌದ್ಧಿಕವನ್ನು ಯೋಗಬಂಧು ಕಿಶನ್ ಅವರು ತಿಳಿಸಿದರು.ಸೂರ್ಯನಮಸ್ಕಾರವನ್ನು 3 ಹಂತಗಳಲ್ಲಿ ಕ್ರಮವಾಗಿ ಯೋಗಬಂಧುಗಳಾದ ಶ್ರೀಮತಿ ದೇವಿಕಾ, ಶ್ರೀಯುತ ದೀರಜ್ , ಶ್ರೀಮತಿ ಉಷಾ, ನಡೆಸಿಕೊಟ್ಟರು. ಆರಂಭಿಕ ಸಿದ್ದತೆಯನ್ನು ಶ್ರೀಮತಿ ವೃಂದಾ ನೆರವೇರಿಸಿದರು. ಮಂತ್ರ ಪಠಣೆಯನ್ನು ಶ್ರೀಮತಿ ಸವಿತಾ, ಪ್ರಾತ್ಯಕ್ಷಿತೆಯಲ್ಲಿ ವಿಟ್ಲ ನಗರದ ಯೋಗ ಬಂಧುಗಳು ಸಹಕರಿಸಿದರು.ನಿರೂಪಣೆಯನ್ನು ಶ್ರೀಮತಿ ಶುಭಲಕ್ಷ್ಮಿ, ಸ್ವಾಗತ ಶ್ರೀಮತಿ ಪವಿತ್ರ,ವಂದನಾರ್ಪಣೆ ಶ್ರೀಯತ ಕುಶಾಲಪ್ಪ, ಅನ್ನಪೂರ್ಣೇಶ್ವರಿ ಮಂತ್ರವನ್ನು ಶ್ರೀಮತಿ ಗಾಯತ್ರಿ ಪಠಿಸಿದ್ದರು.ವಿಟ್ಲ ನಗರದ 17 ಶಾಖೆಗಳ 550ಕ್ಕೂ ಯೋಗಬಂಧುಗಳು ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಹೊರಾಂಗಣದಲ್ಲಿ ಸಾರ್ವಜನಿಕ ಉಪಸ್ಥಿತಿಯಲ್ಲಿ108 ಸೂರ್ಯ ನಮಸ್ಕಾರ ನೇರೆವೆರಿಸಿದ್ದರು







