- Advertisement -
- Advertisement -



ವಿಟ್ಲ : ಕೊಳ್ನಾಡು ಗ್ರಾಮದ ಸಾಲೆತ್ತೂರು ಎಂಬಲ್ಲಿ ತೋಟದ ಮಧ್ಯೆ ದಾರಿ ಬದಿಯ ಆವರಣವಿಲ್ಲದ ಬಾವಿಗೆ ಆಕಸ್ಮಿಕವಾಗಿ ಬಿದ್ದು ಕೃಷಿಕ ಸಾವನ್ನಪ್ಪಿರುವ ಘಟನೆ ನಡೆದಿದೆ.
ಸಾಲೆತ್ತೂರು ಕೋಡಿ ನಿವಾಸಿ, ಕೃಷ್ಣಪ್ಪ ಪೂಜಾರಿ(70) ಮೃತರು. ಮಂಗಳವಾರ ಸಂಜೆ ಎಂದಿನಂತೆ ಸಾಲೆತ್ತೂರು ಪೇಟೆಗೆ ಹೋಗಿ ಹಿಂತಿರುಗಿ ಬರುವಾಗ ರಾತ್ರಿಯಾಗಿದ್ದು, ಆಯತಪ್ಪಿ ಬಾವಿಗೆ ಜಾರಿ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ ಎನ್ನಲಾಗಿದೆ.
- Advertisement -








