Wednesday, October 28, 2026
spot_imgspot_img
spot_imgspot_img

ಕೋಲಾರ: ಯಲ್ಲೇಶ್ ಹತ್ಯೆ ಪ್ರಕರಣಕ್ಕೆ ಹೊಸ ತಿರುವು-ತಂಗಿಯನ್ನು ನಿಂದನೆ ಆರೋಪ: ಐದು ಬಾರಿ ಪೊಲೀಸ್ ಠಾಣೆಗೆ ದೂರು ನೀಡಿದ್ದರೂ ಕ್ರಮ ಕೈಗೊಳ್ಳಲಿಲ್ಲ – ಯುವಕನಿಂದ ಹತ್ಯೆ ಒಪ್ಪಿಗೆ ವಿಡಿಯೋ ವೈರಲ್

- Advertisement -
- Advertisement -

ಕೋಲಾರ: ಜಿಲ್ಲೆಯ ಮೆಟ್ಟುಬಂಡೆ ಸಮೀಪ ನಡೆದ ಯಲ್ಲೇಶ್ ಹತ್ಯೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಶಂಕಿತ ಆರೋಪಿಯೊಬ್ಬ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮೂಲಕ ಸ್ವತಃ ಹತ್ಯೆ ಮಾಡಿರುವುದಾಗಿ ಒಪ್ಪಿಕೊಂಡಿರುವುದು ಪ್ರಕರಣವನ್ನು ಮತ್ತಷ್ಟು ಗಂಭೀರಗೊಳಿಸಿದೆ.


ಜನವರಿ 27ರಂದು ಯಲ್ಲೇಶ್ (41) ಎಂಬಾತನನ್ನು ನಿರ್ದಯವಾಗಿ ಕೊಲೆ ಮಾಡಲಾಗಿತ್ತು. ಇದೀಗ ನರಸಾಪುರ ನಿವಾಸಿ ಸಂತೋಷ್ ಅವರ ಪುತ್ರ ಬಿಂದು ಕುಮಾರ್ ಎಂಬಾತನೇ ಹತ್ಯೆ ನಡೆಸಿರುವುದಾಗಿ ವಿಡಿಯೋ ಸಂದೇಶದಲ್ಲಿ ಬಹಿರಂಗಪಡಿಸಿದ್ದಾನೆ.
“ಯಲ್ಲೇಶ್‌ನ ಕೊಲೆ ಮಾಡಿದ್ದು ನಾನೇ. ನನ್ನೊಂದಿಗೆ ಅಕ್ಷಯ್ ಹಾಗೂ ಅವನ ಸಹೋದರ ಸಹ ಇದ್ದರು,” ಎಂದು ಬಿಂದು ಕುಮಾರ್ ಹೇಳಿಕೊಂಡಿದ್ದಾನೆ.


ಘಟನೆಗೆ ತನ್ನ ತಂದೆ ಸಂತೋಷ್ ಅವರಿಗೆ ಯಾವುದೇ ಸಂಬಂಧವಿಲ್ಲ ಎಂದು ಬಿಂದು ಕುಮಾರ್ ಸ್ಪಷ್ಟಪಡಿಸಿದ್ದಾನೆ. “ನನ್ನ ತಂದೆ ಎಂಟು ವರ್ಷಗಳಿಂದ ಮನೆ ಬಿಟ್ಟು ದೂರವಿದ್ದಾರೆ. ಈ ಪ್ರಕರಣದಲ್ಲಿ ಅವರು ಭಾಗಿಯಾಗಿಲ್ಲ,” ಎಂದು ಹೇಳಿದ್ದಾನೆ.


ತಪ್ಪೊಪ್ಪಿಗೆಯಲ್ಲಿ ಬಿಂದು ಕುಮಾರ್ ಗಂಭೀರ ಆರೋಪಗಳನ್ನು ಮಾಡಿದ್ದಾನೆ. “ಯಲ್ಲೇಶ್ ನನ್ನ ತಂಗಿಯ ಬಗ್ಗೆ ಅವಾಚ್ಯವಾಗಿ ಮಾತನಾಡುತ್ತಿದ್ದ. ಇದಕ್ಕೆ ಸಂಬಂಧಿಸಿದ ಆಡಿಯೋ ದಾಖಲೆಗಳು ನಮ್ಮ ಬಳಿ ಇವೆ. ಈ ವಿಷಯವಾಗಿ ಐದು ಬಾರಿ ಪೊಲೀಸ್ ಠಾಣೆಗೆ ದೂರು ನೀಡಿದ್ದರೂ ಕ್ರಮ ಕೈಗೊಳ್ಳಲಿಲ್ಲ,” ಎಂದು ಆರೋಪಿಸಿದ್ದಾನೆ.


ಇದಲ್ಲದೆ, “ನನ್ನ ಮೇಲೆ ಹಲ್ಲೆ ಮಾಡಿಸಿ, ನಮ್ಮನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ. ಸಾಮಾಜಿಕ ಜಾಲತಾಣದಲ್ಲಿಯೂ ಬೆದರಿಕೆ ಸಂದೇಶಗಳನ್ನು ಹಾಕಿದ್ದ,” ಎಂದು ಹೇಳಿದ್ದಾನೆ. ನನ್ನ ಕುಟುಂಬದ ಜೀವಕ್ಕೆ ಅಪಾಯವಿತ್ತು. ನಮ್ಮನ್ನು ರಕ್ಷಿಸಿಕೊಳ್ಳಲು ಮೊದಲೇ ಕ್ರಮ ಕೈಗೊಳ್ಳಬೇಕಾಯಿತು. ಯಲ್ಲೇಶ್‌ನನ್ನು ಕಲ್ಲಿನಿಂದಲ್ಲ, ಮಚ್ಚಿನಿಂದ ಕೊಲೆ ಮಾಡಲಾಗಿದೆ. ಮಚ್ಚಿನೊಂದಿಗೆ ನ್ಯಾಯಾಲಯಕ್ಕೆ ಶರಣಾಗುತ್ತೇನೆ ಎಂದು ಆತ ವಿಡಿಯೋದಲ್ಲಿ ಹೇಳಿಕೊಂಡಿದ್ದಾನೆ.

ಮತ್ತೊಂದು ಮಹತ್ವದ ಅಂಶವಾಗಿ, ಯಲ್ಲೇಶ್, ಶಂಕಿತ ಆರೋಪಿ ಸಂತೋಷ್ ಅವರ ಪತ್ನಿಯನ್ನು ಪ್ರೀತಿಸಿ ಮದುವೆಯಾಗಿದ್ದನೆಂಬ ಮಾಹಿತಿ ಹೊರಬಿದ್ದಿದೆ. ಈ ಹಿನ್ನೆಲೆಯಲ್ಲಿಯೇ ಕುಟುಂಬದೊಳಗಿನ ವೈಷಮ್ಯ ಹಾಗೂ ದ್ವೇಷ ಈ ಹತ್ಯೆಗೆ ಕಾರಣವಾಗಿರಬಹುದೆಂಬ ಶಂಕೆ ವ್ಯಕ್ತವಾಗಿದೆ.

ಪೊಲೀಸರ ತನಿಖೆ ಮುಂದುವರಿಕೆ
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ತಪ್ಪೊಪ್ಪಿಗೆ ವಿಡಿಯೋವನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಆರೋಪಿಗಳ ಪತ್ತೆ ಹಾಗೂ ಬಂಧನಕ್ಕಾಗಿ ವಿಶೇಷ ತಂಡಗಳನ್ನು ರಚಿಸಲಾಗಿದೆ.

- Advertisement -

Related news

error: Content is protected !!