Thursday, July 23, 2026
spot_imgspot_img
spot_imgspot_img

ಬೆಂಗಳೂರು: ಮೆಟ್ರೋ ಪ್ರಯಾಣ ದರ 5% ಏರಿಕೆ – ಫೆ.9 ರಿಂದ ಜಾರಿ!

- Advertisement -
- Advertisement -

ಬೆಂಗಳೂರು: ನಮ್ಮ ಮೆಟ್ರೋ ಪ್ರಯಾಣ ದರ ದುಬಾರಿಯಾಗಲಿದೆ. ಒಂದು ವರ್ಷದ ಹಿಂದಷ್ಟೇ ಪ್ರಯಾಣ ದರವನ್ನು 71.5% ರಷ್ಟು ಹೆಚ್ಚಳ ಮಾಡಿದ್ದ ಬೆಂಗಳೂರು ಮೆಟ್ರೋ ರೈಲು ಕಾರ್ಪೋರೇಷನ್‌ ಲಿಮಿಟೆಡ್‌ ಈಗ 5% ಹೆಚ್ಚಳ ಮಾಡಲು ನಿರ್ಧರಿಸಿದೆ.

ಬಿಎಂಆರ್‌ಸಿಎಲ್‌ ಪ್ರತಿ ವರ್ಷ 5% ರಷ್ಟು ಪ್ರಯಾಣ ದರ ಹೆಚ್ಚಳ ಮಾಡಬಹುದು ಎಂದು ದರ ನಿಗದಿ ಸಮಿತಿ 2025ರಲ್ಲಿ ಶಿಫಾರಸ್ಸು ಮಾಡಿತ್ತು. ಈ ಬಗ್ಗೆ ಎರಡು ದಿನಗಳ ಹಿಂದೆ ನಡೆದ ಬಿಎಂಆರ್‌ಸಿಎಲ್‌ ಮಂಡಳಿ ಸಭೆಯಲ್ಲಿ ಚರ್ಚೆ ನಡೆದು 5% ರಷ್ಟು ಏರಿಸಲು ಅನುಮೋದನೆ ನೀಡುವಂತೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿತ್ತು.

ಸೋಮವಾರ(ಫೆ.2) ಕರ್ನಾಟಕ ಸರ್ಕಾರ ಈ ಪ್ರಸ್ತಾಪಕ್ಕೆ ಅನುಮೋದನೆ ನೀಡಿದ್ದು ಹೊಸ ದರ ಮುಂದಿನ ಸೋಮವಾರ(ಫೆ.9) ಜಾರಿಗೆ ಬರಲಿದೆ. ಕನಿಷ್ಠ 1 ರೂ. ಹಾಗೂ ಗರಿಷ್ಠ 5 ರೂ. ಹೆಚ್ಚಳವಾಗಲಿದೆ. ಕನಿಷ್ಠ 10 ಇರುವ ದರ 11ಕ್ಕೆ, ಗರಿಷ್ಠ 90 ಇರುವ ದರ 95ಕ್ಕೆ ಏರಿಕೆಯಾಗಲಿದೆ ಎಂದು ವರದಿ ಮೂಲಕ ತಿಳಿದು ಬಂದಿದೆ.

- Advertisement -

Related news

error: Content is protected !!