Wednesday, July 22, 2026
spot_imgspot_img
spot_imgspot_img

ಕಡಬ: ಅಜಾಗರೂಕತೆಯಿಂದ ಕಾರು ಚಲಾಯಿಸಿ ವಿದ್ಯುತ್ ಕಂಬಕ್ಕೆ ಡಿಕ್ಕಿ: ದೂರು ದಾಖಲು !

- Advertisement -
- Advertisement -

ಕಡಬ: ಫೆ:04 ರಂದು ಬೆಳಿಗ್ಗೆ 05:30ಕ್ಕೆ ಕಡಬ ತಾಲೂಕು, ಕೋಡಿಂಬಾಳ ಗ್ರಾಮದ ಪಡೆಜ್ಜಾರು ಮುರಚೆಡವು ಎಂಬಲ್ಲಿ ಕಾರು ಚಾಲಕ ಸೀತಾರಾಮ ಗೌಡ ಅವರು ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ವಾಹನವನ್ನು ಚಲಾಯಿಸಿ, ರಸ್ತೆ ಬದಿಯಲ್ಲಿದ್ದ H.T ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದಾರೆ ಎಂದು ಕಡಬ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ

ಇದರಿಂದ ವಿದ್ಯುತ್ ಕಂಬಕ್ಕೆ ಹಾನಿ ಉಂಟಾಗಿದ್ದು, ವಿದ್ಯುತ್ ಕಂಬದ ಅಂದಾಜು ಮೌಲ್ಯ ರೂ.17,500/- ಆಗಿರುತ್ತದೆ. ಈ ಕುರಿತು ಮೆಸ್ಕಾಂ ಕಡಬ ಶಾಖೆಯ ಸಹಾಯಕ ಇಂಜಿನಿಯರ್ ಸತ್ಯನಾರಾಯಣ ಸಿ.ಕೆ. ರವರು ದೂರು ನೀಡಿದ್ದು, ಆರೋಪಿಯ ವಿರುದ್ಧ ಕಲಂ 281 BNS–2023 ರಂತೆ ಕಡಬ ಪೊಲೀಸ್ ಠಾಣೆಯಲ್ಲಿ ಅ.ಕ್ರ: 13/2026 ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ವರದಿ ಮೂಲಕ ತಿಳಿದುಬಂದಿದೆ.

- Advertisement -

Related news

error: Content is protected !!