ಆಲಂಕಾರು: ಕಡಬ ತಾಲೂಕು ಆಲಂಕಾರು ಗ್ರಾಮದ ನಗ್ರಿ ನಿವಾಸಿ ಬೆಳರವರ ಪತ್ನಿ ಕೊರಪ್ಪೋಳು(65ವ) ಶಾಂತಿಮೊಗರು ಕುಮಾರಧಾರ ನದಿಗೆ ಕಾಲು ಜಾರಿ ಬಿದ್ದು ಸಾವನ್ನಪ್ಪಿದ ಘಟನೆ ಶನಿವಾರ ಸಂಜೆ ನಡೆದಿದೆ.ಮೃತರು ಶನಿವಾರ ಬೆಳಿಗ್ಗೆ ಆತೂರಿಗೆ ಔಷಧಿ ತರಲೆಂದು ತೆರಳಿದ್ದರು.

ಆತೂರಿನಿಂದ ಆಲಂಕಾರಿನವರೆಗೆ ಬಸ್ಸಲ್ಲಿ ಬಂದು ಆಲಂಕಾರಿನಿಂದ ಶಾಂತಿಮೊಗರುವಿನ ಮೂಲಕ ಕುಮಾರಧಾರ ನದಿ ತಟದ ಮೂಲಕ ನಡೆದುಕೊಂಡು ನಗ್ರಿ ತಮ್ಮ ಮನೆಗೆ ಸಾಗಿದ್ದರು. ಈ ವೇಳೆ ಕುಮಾರಧಾರ ಕಿಂಡಿ ಅಣೆಕಟ್ಟಿನ ಕಡಿದಾದ ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಕಾಲುಜಾರಿ ನದಿಗೆ ಬಿದ್ದಿರ ಬಹುದು ಎಂದು ಅಂದಾಜಿಸಲಾಗಿದೆ. ಸಂಜೆ ವೇಳೆ ಬೋಟಿಂಗ್ ಗೆ ಬಂದ ಯುವಕರಿಬ್ಬರು ನದಿಯ ಗಿಡಗಂಟಿಯಲ್ಲಿ ಮಹಿಳೆಯ ಶವ ಸಿಕ್ಕಿಕೊಂಡಿರುವುದನ್ನು ಗಮನಿಸಿ ಸ್ಥಳಿಯರಿಗೆ ತಿಳಿಸಿದ್ದರು. ಈ ವೇಳೆ ಸ್ಥಳಿಯರು ಬಂದು ಪರಿಶೀಲಿಸಿದಾಗ ಕಿಂಡಿ ಅಣೆಕಟ್ಟಿನ ಬಳಿ ಬೆಳಿಗ್ಗೆ ತೆಗೆದುಕೊಂಡ ಔಷಧಿ, ಆಧಾರ್ ಕಾರ್ಡ್ ಮತ್ತು ಆತೂರಿನಿಂದ ಆಲಂಕಾರಿಗೆ ಪ್ರಯಾಣಿಸಿದ ಬಸ್ ಟಿಕೆಟ್ ಸಿಕ್ಕಿದ್ದು ಆಧಾರ್ ಕಾರ್ಡ್ ವಿಳಾಸದ ಆಧಾರದಲ್ಲಿ ಮೃತರ ಮನೆಯವರನ್ನು ಸಂಪರ್ಕಕಿಸಲಾಗಿದೆ ಎಂದು ಪುತ್ರ ಭಾಸ್ಕರ ನೀಡಿರುವ ದೂರಿನಂತೆ ಕಡಬ ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಶವವನ್ನು ಸ್ಥಳಿಯರ ಸಹಕಾರದಿಂದ ನದಿಯಿಂದ ತೆರವುಗೊಳಿಸಿ ಮಹಜರಿಗೆ ಕಡಬಕ್ಕೆ ಸಾಗಿಸಲಾಗಿದೆ.ಮೃತರು ಪತಿ ಬೆಳ್ತ, ಮಗ ಭಾಸ್ಕರ,ಮಗಳು ಹೊನ್ನಮ್ಮ,ರೂಪಾ,ಮಾಧವಿ, ಸೊಸೆ ಹರಿಣಾಕ್ಷಿ ಸೇರಿದಂತೆ ಅಳಿಯಂದಿರು,ಮೊಮ್ಮಕ್ಕಳನ್ನು ಕುಟುಂಬಸ್ಥರನ್ನು ಅಗಲಿದ್ದಾರೆ.








