Tuesday, July 21, 2026
spot_imgspot_img
spot_imgspot_img

ಬಿಎಂಟಿಸಿ ಬಸ್‌ ಬೆಂಕಿಗಾಹುತಿ – ತಪ್ಪಿದ ಅನಾಹುತ

- Advertisement -
- Advertisement -

ಬೆಂಗಳೂರು: ನಗರದ ಲಗ್ಗೆರೆ ಬಸ್ ನಿಲ್ದಾಣದಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ)ಗೆ ಸೇರಿದ ಬಸ್ ಒಂದು ಭೀಕರ ಅಗ್ನಿ ಅವಘಡಕ್ಕೆ ಆಹುತಿಯಾದ ಘಟನೆ ನಡೆದಿದೆ.

ಶನಿವಾರ ಸಂಜೆ ಸುಮಾರು 4:50ರ ಹೊತ್ತಿಗೆ ಮೆಜೆಸ್ಟಿಕ್ನಿಂದ ಲಗ್ಗೆರೆ ಬಸ್ ನಿಲ್ದಾಣಕ್ಕೆ ಆಗಮಿಸಿದ್ದ ಬಸ್ಸನ್ನು ನಿಲುಗಡೆ ಮಾಡಿದ ಬಳಿಕ ಚಾಲಕ ಹಾಗೂ ನಿರ್ವಾಹಕರು ನಿಲ್ದಾಣದೊಳಗೆ ತೆರಳಿದ್ದರು. ಅದಾದ ಐದು ನಿಮಿಷಗಳಲ್ಲಿ ಬಸ್‌ನ ಇಂಜಿನ್ ಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದೆ.

ಘಟನೆ ಗಮನಕ್ಕೆ ಬಂದ ತಕ್ಷಣ ಸ್ಥಳದಲ್ಲಿದ್ದ ಅಗ್ನಿಶಾಮಕ ಸಿಬ್ಬಂದಿ, ಅಧಿಕಾರಿಗಳು, ಚಾಲಕ-ನಿರ್ವಾಹಕರು ಹಾಗೂ ಸ್ಥಳೀಯರು ಬೆಂಕಿ ನಂದಿಸಲು ಹರಸಾಹಸ ಪಟ್ಟರು. , ಬೆಂಕಿ ತೀವ್ರವಾಗಿ ವ್ಯಾಪಿಸಿಕೊಂಡ ಪರಿಣಾಮ ನಿಯಂತ್ರಿಸಲು ಸಾಧ್ಯವಾಗದೆ, ಕೇವಲ 15ರಿಂದ 20 ನಿಮಿಷಗಳೊಳಗೆ ಬಸ್ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ.

ಅದೃಷ್ಟವಶಾತ್ ಘಟನೆ ಸಂಭವಿಸಿದ ವೇಳೆ ಬಸ್‌ನಲ್ಲಿ ಯಾವುದೇ ಪ್ರಯಾಣಿಕರು ಇರದ ಕಾರಣ ಪ್ರಾಣಹಾನಿ ತಪ್ಪಿರುವುದಾಗಿ ಮೂಲಗಳಿಂದ ತಿಳಿದುಬಂದಿದೆ.

- Advertisement -

Related news

error: Content is protected !!