


ವಿಟ್ಲ: ಸುಮಾರು 300 ವರ್ಷಗಳ ಹಿಂದೆ ವಿಟ್ಲ ಅರಮನೆಯ ರಾಜರ ಆಳ್ವಿಕೆಯ ಕಾಲದಲ್ಲಿ ಜನರಿಗೆ ಹಾಗೂ ಕೃಷಿ ಬೆಳೆಗಳಿಗೆ ಪಕ್ಷಿ ಮೃಗಾದಿಗಳ ಉಪದ್ರಗಳು ಜಾಸ್ತಿಯಾದಾಗ ಆಗಿನ ರಾಜರ ಸೂಚನೆ ಮೇರೆಗೆ ಒತ್ತೆಸಾರ್ ಕುಟುಂಬಸ್ಥರ ಹಿರಿಯರು ಹುಲಿ, ಹಂದಿ, ಪಕ್ಷಿ ಮೃಗಾದಿಗಳನ್ನು ಬೇಟೆಯಾಡಿ ಹಿಡಿದಿದ್ದರಿಂದ ರಾಜರಿಂದ ಪ್ರಶಸ್ತಿ ಲಭಿಸಿದ್ದು ಮತ್ತು ರಾಜರಿಂದ ಮಲರಾಯ, ಕಕ್ಕರಿ ಚಾಮುಂಡಿ ಎಂಬೀ ಶಕ್ತಿಗಳನ್ನು ಆರಾಧಿಸಲು ನಿರ್ದೇಶನವನ್ನು ಮಾಡಿ ಅವುಗಳ ಆರಾಧನೆಗಾಗಿ ಭೂಮಿಯನ್ನು ಬಿಟ್ಟುಕೊಟ್ಟಿರುವ ಇತಿಹಾಸ ತಾಮ್ರ ಶಾಸನಗಳಲ್ಲಿ ಇದೆ.

ಒತ್ತೆಸಾರ್ ತರವಾಡು ಕುಟುಂಬದಲ್ಲಿ ಈ ಕೆಳಗಿನ ವಿಭಾಗಗಳಿದ್ದು, ಮುಂದೆ ಎಲ್ಲ ವಿಭಾಗದವರು ಸೇರಿ ಅಂದಾಜು ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ದೈವಸ್ಥಾನ ಹಾಗೂ ತರವಾಡು ಮನೆ ಜೀರ್ಣೋದ್ಧಾರ ಕಾರ್ಯಗಳನ್ನು ಮಾಡುವುದೆಂದು ತೀರ್ಮಾನಿಸಲಾಗಿದೆ.
ಒತ್ತೆಸಾರು- ಆಲಂಗಾರು
ಭಟ್ರಮೂಲೆ- ಅಲಂಗಾರು
ದೇವುಮೂಲೆ-ಸೆಂಟ್ಯಾರ್
ಮುದೂರು-ಡೆಪ್ಪಿನಿ
ದೊರ್ತೋಡಿ- ಊರುವಳು
ಬಲ್ನಾಡು-ಓಟೆಮನೆ
ಎಡಮಂಗಲ- ಕೂಟಾಜೆ
ಬೆಳ್ಳಾರೆ- ಪೆರಿಯಾಣ
ಕಡಬ-ತುಂಬೆತಡ್ಕ
ಬೈತಡ್ಕ- ಜೇಡರಕೇರಿ
ನೆಲಪ್ಪಾಲು-ಮುರ-ಧರ್ಮಸ್ಥಳ
ಕುಶಾಲನಗರ ಗುಡ್ಡೆಹೊಸೂರು
ಅರ್ಕಲ್ತೋಟ ಕುಂಡಡ್ಕ
ಗುಮ್ಮಟಗದ್ದೆ ಪಾಣಾಜೆ
ಇತ್ತೀಚಿಗೆ ನಡೆದ ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡು ಬಂದಿರುವ ಪ್ರಕಾರ ಫೆ.20 ನೇ ಶುಕ್ರವಾರ ಬೆಳಿಗ್ಗೆ 8.30 ಗಂಟೆಗೆ ದಿ. ಶ್ರೀ ಪೂವಪ್ಪ ಪೂಜಾರಿ ಒತ್ತೆಸಾರ್ ಉಕ್ಕುಡ, ಇವರ ಮನೆಯಿಂದ ಶ್ರೀ ರುದ್ರಚಾಮುಂಡಿ ದೈವದ ಸಾನಿಧ್ಯವನ್ನು ಭವ್ಯವಾದ ಮೆರವಣಿಗೆಯಲ್ಲಿ ತಂದು ಇತರ ಸಪರಿವಾರ ದೈವಗಳನ್ನು ಒತ್ತೆಸಾರ್ ತರವಾಡು ಮನೆಯಲ್ಲಿ ನಿರ್ಮಿಸಿದ ಬಾಲಾಲಯದಲ್ಲಿ ಕುಂಟು ಕುಡೇಲು ಶ್ರೀ ರಘುರಾಮ ತಂತ್ರಿಯವರ ನೇತೃತ್ವದಲ್ಲಿ ಪ್ರತಿಷ್ಠಾಪಿಸುವುದಾಗಿ ಕುಟುಂಬದ ಗುರು ಹಿರಿಯರು ನಿಶ್ಚಯಿಸಿದ್ದು, ಈ ಶುಭ ಸಮಾರಂಭಕ್ಕೆ ತಾವೆಲ್ಲರೂ ಬಂದು ಶ್ರೀ ದೈವಗಳ ಕೃಪೆಗೆ ಪಾತ್ರರಾಗಬೇಕಾಗಿ ಒತ್ತೆಸಾರ್ ಗೌಡರ ತರವಾಡು ಸಮಿತಿ ಹಾಗೂ ಒತ್ತೆಸಾರ್ ಗೌಡರ ತರವಾಡು ಜೀರ್ಣೋದ್ಧಾರ ಸಮಿತಿ ಉಕ್ಕುಡ ವಿಟ್ಲ ಇವರ ಕೋರಿಕೆ.








