Thursday, June 4, 2026
spot_imgspot_img
spot_imgspot_img

ಅಸ್ಸಾಂ: 30 ಸಿಲಿಂಡರ್‌ ಸ್ಫೋಟ, 66 ಗುಡಿಸಲುಗಳು ಭಸ್ಮ!

- Advertisement -
- Advertisement -

ಅಸ್ಸಾಂ: ಗುವಾಹಟಿ ಇಲ್ಲಿನ ಜಲುಕ್‌ಬರಿಯಲ್ಲಿ ಸುಮಾರು 30 ಸಿಲಿಂಡರ್‌ಗಳು ಸ್ಫೋಟಗೊಂಡ ಪರಿಣಾಮ ಅಗ್ನಿಅನಾಹುತ ಸಂಭವಿಸಿದ್ದು 66 ಗುಡಿಸಲುಗಳು ಬೆಂಕಿಗಾಹುತಿಯಾಗಿವೆ.ಇಲ್ಲಿಯವರೆಗೆ ಯಾವುದೇ ಸಾವು-ನೋವಿನ ಬಗ್ಗೆ ವರದಿಯಾಗಿಲ್ಲ.

ಘಟನೆಯ ಹಿಂದಿನ ನಿಖರ ಕಾರಣಗಳು ತಿಳಿದು ಬಂದಿಲ್ಲ. ಪ್ರಾಥಮಿಕ ತನಿಖೆಯಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿರಬಹುದು ಎಂದು ಅಂದಾಜಿಸಲಾಗಿದೆ. ಗುಡಿಸಲೊಂದರಲ್ಲಿ ಬೆಂಕಿ ಕಾಣಿಸಿಕೊಂಡ ನಂತರ ಅದು ಇತರೆ ಗುಡಿಸಲುಗಳಿಗೆ ಹರಡಿತ್ತು.

ಎಲ್ಲಾ ಮನೆಗಳಲ್ಲಿ ಇರಿಸಲಾಗಿದ್ದ ಎಲ್‌ಪಿಜಿ ಸಿಲಿಂಡರ್‌ಗಳು ಒಂದರ ಬಳಿಕ ಒಂದರಂತೆ ಸ್ಫೋಟಗೊಂಡಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.14 ಅಗ್ನಿ ಶಾಮಕ ವಾಹನಗಳು ಸುಮಾರು ಮೂರು ಗಂಟೆ ಕಾರ್ಯಾಚರಣೆನಡೆಸಿ ಬೆಂಕಿ ನಂದಿಸಿವೆ.

- Advertisement -

Related news

error: Content is protected !!