- Advertisement -
- Advertisement -

ವಿಟ್ಲ: ಫೆ.25ರಂದು ಬೆಳಗ್ಗಿನ ಜಾವ ರೌಂಡ್ಸ್ ಕರ್ತವ್ಯದಲ್ಲಿದ್ದ ವಿಟ್ಲ ಪೊಲೀಸ್ ಠಾಣೆ ಉಪನಿರೀಕ್ಷಕರು ಕುಡ್ತಮುಗೇರು ಪ್ರದೇಶದಲ್ಲಿ ಅನುಮಾನಾಸ್ಪದವಾಗಿ ರಸ್ತೆ ಬದಿಯಲ್ಲಿ ನಿಂತಿದ್ದ (KA 12 B 1743) ನೋಂದಣಿಯ ಖಾಲಿ ಪಿಕ್ಅಪ್ ವಾಹನವನ್ನು ಗಮನಿಸಿದರು.ವಾಹನದ ಬಳಿ ತೆರಳಿ ದಾಖಲಾತಿಗಳ ಬಗ್ಗೆ ವಿಚಾರಿಸಿದಾಗ ಚಾಲಕನು ಅಗತ್ಯ ದಾಖಲೆಗಳನ್ನು ತಕ್ಷಣ ಹಾಜರುಪಡಿಸಲು ವಿಫಲರಾದರು.

ಈ ಹಿನ್ನೆಲೆಯಲ್ಲಿ ವಾಹನವನ್ನು ಪೊಲೀಸ್ ಠಾಣೆಗೆ ಕರೆತಂದು, ದಾಖಲೆಗಳನ್ನು ಸಲ್ಲಿಸುವಂತೆ ಸೂಚಿಸಲಾಯಿತು. ನಂತರ ಚಾಲಕನು ಬೆಳಿಗ್ಗೆ ವಾಹನದ ಅಗತ್ಯ ದಾಖಲಾತಿಗಳನ್ನು ಹಾಜರುಪಡಿಸಿದ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಿ, ಯಾವುದೇ ಅನಿಯಮ ಕಂಡುಬರದ ಕಾರಣ ವಾಹನವನ್ನು ಬಿಡುಗಡೆಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.


- Advertisement -








