Tuesday, July 21, 2026
spot_imgspot_img
spot_imgspot_img

ಅಮೆರಿಕ- ಇಸ್ರೇಲ್ ಜಂಟಿ ದಾಳಿ; ಇರಾನ್‌ ಸರ್ವೋಚ್ಛ ನಾಯಕ ಖಮೇನಿ ಮೃತ್ಯು

- Advertisement -
- Advertisement -

ಟೆಹ್ರಾನ್: ಇರಾನ್ ಸರ್ಕಾರವು ತನ್ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಸಾವನ್ನು ಅಧಿಕೃತವಾಗಿ ದೃಢಪಡಿಸಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇಸ್ರೇಲ್ ಪ್ರಕಟಿಸಿದ ಹೇಳಿಕೆಗಳ ನಂತರ, ಇದೀಗ ಇರಾನ್ ರಾಜ್ಯ ಮಾಧ್ಯಮಗಳೂ ಅಮೆರಿಕ-ಇಸ್ರೇಲ್ ದಾಳಿಯಲ್ಲಿ ಖಮೇನಿ ಸಾವನ್ನಪ್ಪಿದ್ದಾರೆ ಎಂದು ತಿಳಿಸಿವೆ. ಜೊತೆಗೆ ದೇಶದಲ್ಲಿ 40 ದಿನಗಳ ಶೋಕಾಚರಣೆಯನ್ನು ಘೋಷಿಸಲಾಗಿದೆ.

ಶನಿವಾರ ಬೆಳಿಗ್ಗೆ ಆರಂಭವಾದ ದಾಳಿಯಲ್ಲಿ ಟೆಹ್ರಾನ್‌ನಲ್ಲಿರುವ ಖಮೇನಿ ನಿವಾಸ ಸಮುಚ್ಚಯವನ್ನು ಗುರಿಯಾಗಿಸಿ ಹತ್ಯೆ ಮಾಡಲಾಗಿದೆ ಎಂದು ವರದಿಯಿಂದ ತಿಳಿದುಬಂದಿದೆ.

ದಾಳಿಯಲ್ಲಿ ಖಮೇನಿ ಅವರ ಮಗಳು, ಮೊಮ್ಮಗಳು, ಸೊಸೆ ಮತ್ತು ಅಳಿಯ ಸೇರಿದಂತೆ ಕುಟುಂಬದ ಹಲವಾರು ಸದಸ್ಯರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಇದೇ ದಾಳಿಯಲ್ಲಿ ಇರಾನ್ ರಕ್ಷಣಾ ಸಚಿವ ಅಜೀಜ್ ನಾಸಿರ್ಜಾದೆ ಮತ್ತು ಇಸ್ಲಾಮಿಕ್ ಕ್ರಾಂತಿಕಾರಿ ರಕ್ಷಕ ಪಡೆಯ ಮುಖ್ಯಸ್ಥ ಮೊಹಮ್ಮದ್ ಪಾಕಪೂರ್ ಕೂಡ ಮೃತಪಟ್ಟಿದ್ದಾರೆ ಎಂದು ಇರಾನ್ ಸ್ಪಷ್ಟಪಡಿಸಿರುವುದಾಗಿ ವರದಿಯಾಗಿದೆ.

- Advertisement -

Related news

error: Content is protected !!