- Advertisement -
- Advertisement -



ಮೋತಿಹಾರಿ,ಮಾ.4: ಬಿಹಾರದ ಪೂರ್ವ ಚಂಪಾರಣ ಜಿಲ್ಲೆಯಲ್ಲಿ ನೀರು ತುಂಬಿದ್ದ ಹೊಂಡದಲ್ಲಿ ಸ್ನಾನ ಮಾಡುತ್ತಿದ್ದ ಐವರು ಬಾಲಕಿಯರು ಸೇರಿದಂತೆ ಆರು ಮಕ್ಕಳು ಮುಳುಗಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ಬುಧವಾರ ತಿಳಿಸಿದರು.
ಮಂಗಳವಾರ ಸಂಜೆ ಕೇಸರಿಯಾ ಪೋಲಿಸ್ ಠಾಣಾ ವ್ಯಾಪ್ತಿಯ ಲೋಹಾರಗಾವ ಗ್ರಾಮದಲ್ಲಿ ಈ ದುರಂತ ಸಂಭವಿಸಿದೆ.

ಮೃತರನ್ನು ದೀಕ್ಷಾ ಕುಮಾರಿ (12),ಸೋನಾಕ್ಷಿ ಕುಮಾರಿ (9),ಪ್ರಿಯಾ ಕುಮಾರಿ (7),ಆರಾಧ್ಯಾ ಕುಮಾರಿ (11),ಛೋಟಿ ಕುಮಾರಿ (8) ಮತ್ತು ಪ್ರಿನ್ಸ್ ಕುಮಾರ್ (11) ಎಂದು ಗುರುತಿಸಲಾಗಿದೆ.
ಗ್ರಾಮಸ್ಥರ ಪ್ರಕಾರ ಬಾಲಕಿಯರ ಪೈಕಿ ಓರ್ವಳು ಸ್ನಾನಕ್ಕೆಂದು ಹೊಂಡಕ್ಕೆ ಇಳಿದಾಗ ಕಾಲು ಜಾರಿ ಮುಳುಗತೊಡಗಿದ್ದಳು. ಆಕೆಯನ್ನು ಉಳಿಸಲು ನೀರಿಗೆ ಹಾರಿದ್ದ ಇತರ ಮಕ್ಕಳೂ ಮುಳುಗಿದ್ದರು ಎಂದು ಪೊಲೀಸರು ತಿಳಿಸಿದರು.
ಮಕ್ಕಳ ಮೃತದೇಹಗಳನ್ನು ಹೊರಕ್ಕೆ ತೆಗೆದು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ ಎಂದರು.
- Advertisement -








