




ಬೆಂಗಳೂರು: ಯುಗಾದಿ ಹಬ್ಬಕ್ಕೆ ಊರಿಗೆ ಹೊರಟವರಿಗೆ ದರ ಏರಿಕೆ ಬಿಸಿ ಮುಟ್ಟಿದೆ. ಹಬ್ಬದ ಹಿನ್ನೆಲೆ ಖಾಸಗಿ ಬಸ್ ಏಜೆನ್ಸಿಗಳು ಟಿಕೆಟ್ ದರ ಹೆಚ್ಚಿಸಿದ್ದು ಪ್ರಯಾಣಿಕರ ಜೇಬಿಗೆ ಕತ್ತರಿ ಹಾಕಿದೆ.ಯುಗಾದಿ ಮತ್ತು ರಂಜಾನ್ ಹಬ್ಬವನ್ನೇ ಬಂಡವಾಳ ಮಾಡಿಕೊಂಡ ಖಾಸಗಿ ಬಸ್ ಮಾಲೀಕರು 2-3 ಪಟ್ಟು ದರ ಹೆಚ್ಚಳ ಮಾಡಿದ್ದಾರೆ. ಬೆಂಗಳೂರು – ಮಂಗಳೂರು, ಹುಬ್ಬಳ್ಳಿ, ಶಿವಮೊಗ್ಗ ಸೇರಿದಂತೆ ಹಲವು ಮಾರ್ಗಗಳಲ್ಲಿ ದರ ಏರಿಕೆ ಮಾಡಲಾಗಿದೆ.
ಬೆಂಗಳೂರು-ಮಂಗಳೂರು: 600 ರೂ. ಇದ್ದ ದರ ಈಗ 2,999 ರೂ. ವರೆಗೆ ಏರಿಕೆಯಾಗಿದೆ.
ಬೆಂಗಳೂರು-ಧಾರವಾಡ/ಹುಬ್ಬಳ್ಳಿ: 400-1,300 ರೂ. ಇದ್ದ ದರ ಭರ್ಜರಿ 4,500 ರೂ. ತಲುಪಿದೆ.
ಬೆಂಗಳೂರು-ಶಿವಮೊಗ್ಗ: 400 ರೂ. ಇದ್ದ ಸಾಮಾನ್ಯ ದರ ಹಬ್ಬದ ವೇಳೆ 2,799 ರೂ.ಕ್ಕೆ ಜಿಗಿದಿದೆ. ಬೆಂಗಳೂರು-ಧರ್ಮಸ್ಥಳ: 500 ರೂ. ರಿಂದ 3,600 ರೂ.ಕ್ಕೆ ಏರಿಕೆ ಕಂಡುಬಂದಿದೆ.
ಬೆಂಗಳೂರು-ಮೈಸೂರು: ಕೇವಲ 350 ರೂ. ಇದ್ದ ದರ ಈಗ 2,500 ರೂ. ವರೆಗೆ ವಸೂಲಿ ಮಾಡಲಾಗುತ್ತಿದೆ ಎಂದು ವರದಿ ಮೂಲಕ ತಿಳಿದು ಬಂದಿದೆ.








