Wednesday, July 22, 2026
spot_imgspot_img
spot_imgspot_img

ಬೆಂಗಳೂರು: ತಾಯಿ, ಸಹೋದರಿಗೆ ಅವಾಚ್ಯ ಶಬ್ದಗಳಿಂದ ನಿಂದನೆ: ಸ್ನೇಹಿತನಿಂದಲೇ ಯುವಕನ ಹತ್ಯೆ

- Advertisement -
- Advertisement -

ಬೆಂಗಳೂರು: ತನ್ನ ತಾಯಿ ಮತ್ತು ಸಹೋದರಿಗೆ ಅವಾಚ್ಯ ಶಬ್ದಗಳಿಂದ ಬೈದಿದ್ದಕ್ಕೆ ಆಕ್ರೋಶಗೊಂಡ ವ್ಯಕ್ತಿಯೊಬ್ಬ ತನ್ನ ಸ್ನೇಹಿತನನ್ನೇ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಆವಲಹಳ್ಳಿಯಲ್ಲಿ ಮಂಗಳವಾರ(ಮಾ.17) ನಡೆದಿದೆ.

ಬಿಹಾರ ಮೂಲದವರಾದ, ಕುನಾಲ್(22) ಹತ್ಯೆಯಾದವ ನಸ್ರುಲ್ಲಾ (24) ಕೃತ್ಯ ಎಸಗಿದ ಆರೋಪಿ. ಆರೋಪಿಯ ತಾಯಿ ಮತ್ತು ಸಹೋದರಿಯ ಬಗ್ಗೆ ಮೃತ ವ್ಯಕ್ತಿಯು ಕೆಟ್ಟದಾಗಿ ಮಾತನಾಡಿದ್ದೇ ಈ ಹತ್ಯೆಗೆ ಪ್ರಮುಖ ಕಾರಣ ಎನ್ನಲಾಗಿದೆ. ಕೆಲ ವರ್ಷಗಳ ಹಿಂದೆಯೇ ಬೆಂಗಳೂರಿಗೆ ಬಂದು ನೆಲೆಸಿದ್ದು, ಗೋರವೆಗೆರೆ ಸಮೀಪದ ವೇರ್ ಹೌಸ್‌ನಲ್ಲಿ ಕೆಲಸ ಮಾಡುತ್ತಿದ್ದರು.

15 ದಿನಗಳ ಹಿಂದೆ ಇಬ್ಬರು ಮಧ್ಯೆ ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳದಿಂದ ಪರಸ್ಪರ ಹೊಡೆದಾಡಿಕೊಂಡಿದ್ದರು. ಪರಿಣಾಮ ನಸ್ರುಲ್ಲಾ ತಾಯಿ ಮತ್ತು ಸಹೋದರಿಗೆ ಕೆಟ್ಟ ಶಬ್ದ ಬಳಸಿ ಬೈದಿದ್ದ. ತಾಯಿ, ಸಹೋದರಿಯನ್ನು ನಿಂದಿಸಿದ್ದಕ್ಕೆ ಆಕ್ರೋಶಗೊಂಡ ನಸುಲ್ಲಾ, ಸೋಮವಾರ ತಡರಾತ್ರಿ ಮದ್ಯದ ಅಮಲಿನಲ್ಲಿ ಕುನಾಲ್ ರೂಮ್‌ ಗೆ ನುಗ್ಗಿ, ಸುತ್ತಿಗೆಯಿಂದ ಹಲ್ಲೆ ಮಾಡಿ. ಪರಾರಿಯಾಗಿದ್ದಾನೆ.

ತೀವ್ರ ಗಾಯಗೊಂಡ ಕುನಾಲ್‌ನನ್ನು ಆತನ ಸ್ನೇಹಿತನೊಬ್ಬ ಆಸ್ಪತ್ರೆಗೆ ದಾಖಲಿದ್ದಾನೆ. ದುರದೃಷ್ಟವಶಾತ್, ಕುನಾಲ್ ಚಿಕಿತ್ಸೆ ಫಲಿಸದೆ ಮಂಗಳವಾರ ಸಾವನ್ನಪ್ಪಿದ್ದಾನೆ. ಬಳಿಕ ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆರೋಪಿ ನಸ್ರುಲ್ಲಾನನ್ನು ದಾಬಸ್‌ಪೇಟೆಯ ರೈಲ್ವೆ ನಿಲ್ದಾಣದ ಬಳಿ ಬಂಧಿಸಿದ್ದಾರೆ ಎಂದು ವರದಿ ಮೂಲಕ ತಿಳಿದು ಬಂದಿದೆ.

- Advertisement -

Related news

error: Content is protected !!