ಬೆಂಗಳೂರು : ಮೈಸೂರು ಕಾರಾಗೃಹದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕೊಲೆ ಪ್ರಕರಣದಲ್ಲಿ ಅಪರಾಧಿಯಾಗಿರುವ ಬೆಂಗಳೂರಿನ ಕೋರಮಂಗಲದ ಕಿಶನ್ ಎಂಬಾತ ಸಲ್ಲಿಸಿದ್ದ ಅರ್ಜಿಯನ್ನು ಇತ್ತೀಚೆಗೆ ವಜಾಗೊಳಿಸಿರುವ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ.

ಹೈಕೋರ್ಟ್ ಆದೇಶವೇನು?
ಕ್ಷಮಾದಾನ ಅಥವಾ ಅವಧಿಗೂ ಮುನ್ನ ಅಪರಾಧಿಯನ್ನು ಬಿಡುಗಡೆ ಮಾಡುವ ಪ್ರಶ್ನೆಯು ಶಾಸನಬದ್ಧ ನಿಬಂಧನೆ ಮತ್ತು ನೀತಿಯಡಿ ಸೂಕ್ತ ಸರಕಾರಕ್ಕೆ ಮಾತ್ರ ಇದೆ. ಅಪರಾಧಿಯು 20 ವರ್ಷ ಶಿಕ್ಷೆ ಪೂರೈಸಿದ ಬಳಿಕ ಜೀವಾವಧಿ ಶಿಕ್ಷೆಗೆ ಗುರಿಯಾದವನನ್ನು ಬಿಡುಗಡೆ ಮಾಡಬಹುದು ಎಂದು ಐಪಿಸಿ ಸೆಕ್ಷನ್ 57 ಹೇಳುವುದಿಲ್ಲ. ಕಾನೂನಿನ ಅಡಿ ಪರಿವರ್ತನೆ ಅಥವಾ ಕ್ಷಮಾದಾನ ಸಿಗದ ಹೊರತು ಜೈಲು ಶಿಕ್ಷೆಯನ್ನು ಸೀಮಿತಗೊಳಿಸುವ ನಿರ್ದಿಷ್ಟ ನ್ಯಾಯಾಂಗ ನಿರ್ದೇಶನದ ಗೈರಿನ ಹಿನ್ನೆಲೆಯಲ್ಲಿ ಅರ್ಜಿದಾರರಿಗೆ ವಿಧಿಸಿರುವ ಜೀವಾವಧಿ ಶಿಕ್ಷೆಯನ್ನು ಬದುಕಿರುವವರೆಗಿನ ಶಿಕ್ಷೆ ಎಂದು ಪರಿಗಣಿಸಬೇಕಾಗುತ್ತದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಹಾಲಿ ಪ್ರಕರಣದಲ್ಲಿ ಅರ್ಜಿದಾರರು 20 ವರ್ಷ ಸೆರೆಮನೆಯಲ್ಲಿ ಕಳೆದಿರುವುದರಿಂದ ಸರಕಾರಕ್ಕೆ ಕ್ಷಮಾದಾನ ಕೋರಿಕೆ ಸಲ್ಲಿಸಲು ಅರ್ಹರಾಗಿದ್ದಾರೆ. ರಾಜ್ಯ ಸರಕಾರದ ಕ್ಷಮಾದಾನ ನೀತಿ ಮತ್ತು ಸೂಕ್ತ ಶಾಸನಬದ್ಧ ನಿಬಂಧನೆಗಳ ಅಡಿ ಕ್ಷಮಾದಾನ ಕೋರಬಹುದಾಗಿದೆ. ಇಂಥ ಅರ್ಜಿಯನ್ನು ಸಲ್ಲಿಸಿದರೆ ಸೂಕ್ತ ಸರಕಾರ/ಶಿಕ್ಷೆ ಪರಿಶೀಲನಾ ಮಂಡಳಿಯು ಪ್ರಕರಣದ ಆಧಾರದ ಮೇಲೆ ಅಪರಾಧಿಯು ಶಿಕ್ಷೆ ಅನುಭವಿಸಿರುವ ಅವಧಿ, ಅರ್ಜಿದಾರನ ನಡತೆ, ಅಪರಾಧದ ಸ್ವರೂಪ, ಸಂತ್ರಸ್ತರ ಹಿತಾಸಕ್ತಿ ಮತ್ತು ಅನ್ವಯಿಸುವ ನೀತಿಯನ್ನು ಪರಿಗಣಿಸಿ ನಿರ್ಧರಿಸಬಹುದು ಎಂದು ನ್ಯಾಯಲಯ ಆದೇಶದಲ್ಲಿ ಹೇಳಿದೆ.

ಪ್ರಕರಣವೇನು?
ಇಬ್ಬರು ಮಕ್ಕಳನ್ನು ಅಪಹರಿಸಿ ಕೊಲೆ ಮಾಡಿದ ಪ್ರಕರಣದಲ್ಲಿ ಅರ್ಜಿದಾರ ಕಿಶನ್ ಸೇರಿ ಮೂವರಿಗೆ ಬೆಂಗಳೂರಿನ ಸೆಷನ್ಸ್ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿತ್ತು. ಈ ಪ್ರಕರಣದ ಮೇಲ್ಮನವಿ ಪ್ರಕ್ರಿಯೆಯು 2013ರಲ್ಲಿ ಪೂರ್ಣಗೊಂಡಿದ್ದು, ಮರಣದಂಡನೆ ಶಿಕ್ಷೆಯನ್ನು ಹೈಕೋರ್ಟ್ ಜೀವಾವಧಿ ಶಿಕ್ಷೆಯನ್ನಾಗಿ ಪರಿವರ್ತಿಸಿತ್ತು. ಐಪಿಸಿ ಸೆಕ್ಷನ್ 57ರ ಅಡಿ 14 ವರ್ಷ ಜೈಲು ಶಿಕ್ಷೆ ಪೂರ್ಣಗೊಂಡ ಬಳಿಕ ಶಿಕ್ಷೆಯ ಅವಧಿಯಲ್ಲಿ ಯಾವುದೇ ಕಡಿತ ಇರುವುದಿಲ್ಲ ಎಂಬ ಸ್ಪಷ್ಟ ನಿರ್ದೇಶನವನ್ನೂ ನ್ಯಾಯಾಲಯ ನೀಡಿತ್ತು. 2025ರ ಜನವರಿ 15ರಂದು 20 ವರ್ಷ ಜೈಲು ಶಿಕ್ಷೆ ಪೂರೈಸಿದ್ದ ಕಿಶನ್, ಐಪಿಸಿ ಸೆಕ್ಷನ್ 57ರ ಅಡಿ ಕ್ಷಮಾದಾನಕ್ಕೆ ಅರ್ಹವಾಗಿರುವುದರಿಂದ ಬಿಡುಗಡೆ ಮಾಡುವಂತೆ ಕೋರಿದ್ದರು.

ಜೀವಾವಧಿ ಶಿಕ್ಷೆಗೆ ಗುರಿಯಾದವರಿಗೆ 20 ವರ್ಷ ಸೆರೆವಾಸದ ಬಳಿಕ ಬಿಡುಗಡೆ ಹೊಂದುವ ಕಾನೂನಾತ್ಮಕ ಹಕ್ಕಿಲ್ಲ : ಹೈಕೋರ್ಟ್ಬೆಂಗಳೂರು : ಅಪರಾಧ ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾದವರು 20 ವರ್ಷ ಸೆರೆವಾಸ ಪೂರೈಸಿದ ಬಳಿಕ ಸ್ವಯಂಚಾಲಿತವಾಗಿ ಬಿಡುಗಡೆಗೆ ಕೋರುವ ಯಾವುದೇ ರೀತಿಯ ಕಾನೂನಾತ್ಮಕ ಹಕ್ಕು ಹೊಂದಿಲ್ಲ ಎಂದು ಹೈಕೋರ್ಟ್ ಆದೇಶಿಸಿದೆ.
ಮೈಸೂರು ಕಾರಾಗೃಹದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕೊಲೆ ಪ್ರಕರಣದಲ್ಲಿ ಅಪರಾಧಿಯಾಗಿರುವ ಬೆಂಗಳೂರಿನ ಕೋರಮಂಗಲದ ಕಿಶನ್ ಎಂಬಾತ ಸಲ್ಲಿಸಿದ್ದ ಅರ್ಜಿಯನ್ನು ಇತ್ತೀಚೆಗೆ ವಜಾಗೊಳಿಸಿರುವ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ.ಹೈಕೋರ್ಟ್ ಆದೇಶವೇನು?ಕ್ಷಮಾದಾನ ಅಥವಾ ಅವಧಿಗೂ ಮುನ್ನ ಅಪರಾಧಿಯನ್ನು ಬಿಡುಗಡೆ ಮಾಡುವ ಪ್ರಶ್ನೆಯು ಶಾಸನಬದ್ಧ ನಿಬಂಧನೆ ಮತ್ತು ನೀತಿಯಡಿ ಸೂಕ್ತ ಸರಕಾರಕ್ಕೆ ಮಾತ್ರ ಇದೆ. ಅಪರಾಧಿಯು 20 ವರ್ಷ ಶಿಕ್ಷೆ ಪೂರೈಸಿದ ಬಳಿಕ ಜೀವಾವಧಿ ಶಿಕ್ಷೆಗೆ ಗುರಿಯಾದವನನ್ನು ಬಿಡುಗಡೆ ಮಾಡಬಹುದು ಎಂದು ಐಪಿಸಿ ಸೆಕ್ಷನ್ 57 ಹೇಳುವುದಿಲ್ಲ. ಕಾನೂನಿನ ಅಡಿ ಪರಿವರ್ತನೆ ಅಥವಾ ಕ್ಷಮಾದಾನ ಸಿಗದ ಹೊರತು ಜೈಲು ಶಿಕ್ಷೆಯನ್ನು ಸೀಮಿತಗೊಳಿಸುವ ನಿರ್ದಿಷ್ಟ ನ್ಯಾಯಾಂಗ ನಿರ್ದೇಶನದ ಗೈರಿನ ಹಿನ್ನೆಲೆಯಲ್ಲಿ ಅರ್ಜಿದಾರರಿಗೆ ವಿಧಿಸಿರುವ ಜೀವಾವಧಿ ಶಿಕ್ಷೆಯನ್ನು ಬದುಕಿರುವವರೆಗಿನ ಶಿಕ್ಷೆ ಎಂದು ಪರಿಗಣಿಸಬೇಕಾಗುತ್ತದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.