Friday, July 24, 2026
spot_imgspot_img
spot_imgspot_img

ಮುಂಬೈ: ಹೆತ್ತ ಮಗಳ ಮೇಲೆಯೇ ತಂದೆಯಿಂದ  ಅತ್ಯಾಚಾರ!

- Advertisement -
- Advertisement -

ಮುಂಬೈ: ಇಲ್ಲಿನ ಕೆಫೆ ಪರೇಡ್‌ ನೆರೆಹೊರೆಯಲ್ಲಿ ಕಿವಿ ಕೇಳದ ಹಾಗೂ ಮಾತು ಬಾರದ 20ರ ಯುವತಿ ಮೇಲೆ ಆಕೆಯ ತಂದೆಯೇ ಅತ್ಯಾಚಾರ ಎಸಗಿ ಗರ್ಭಿಣಿ ಮಾಡಿರುವ ಘಟನೆ ನಡೆದಿದೆ.

ಡಿಎನ್ಎ ಪರೀಕ್ಷೆಗಳು ಭ್ರೂಣದೊಂದಿಗಿನ ಸಂಬಂಧವನ್ನು ದೃಢಪಡಿಸಿದ ನಂತರ ಯುವತಿಯ ತಂದೆಯನ್ನು ಬಂಧಿಸಲಾಗಿದೆ.

ಯುವತಿ ನನಗೆ ಸುಸ್ತಾಗುತ್ತಿದೆ ಎಂದು ತನ್ನ ಅಜ್ಜಿ ಜೊತೆ ಹೇಳಿಕೊಂಡಿದ್ದಳು. ಕೈ ಸನ್ನೆ ಮೂಲಕ, ತನ್ನ ಹೊಟ್ಟೆಯಲ್ಲಿ ಏನೋ ತೆವಳಿದಂತೆ ಆಗುತ್ತಿದೆ ಎಂದು ತಿಳಿಸಿದ್ದಳು. ನಂತರ ಆಕೆಯನ್ನು  ಆಸ್ಪತ್ರೆಗೆ ದಾಖಲಿಸಲಾಯಿತು. ವೈದ್ಯಕೀಯ ಪರೀಕ್ಷೆಯಲ್ಲಿ ಐದು ತಿಂಗಳ ಗರ್ಭಿಣಿ ಎಂದು ಗೊತ್ತಾಗಿದೆ. ಆಸ್ಪತ್ರೆ ಆಡಳಿತ ಮಂಡಳಿಯು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿತು.

ಪೊಲೀಸರು ಈ ವಿಚಾರವನ್ನು ಯುವತಿಯ ತಂದೆಗೆ ತಿಳಿಸಿದರು ಆದರೆ, ದೂರು ದಾಖಲಿಸಲು ಅವರು  ನಿರಾಕರಿಸಿದರು. ಕೊನೆಗೆ ಕೌನ್ಸಿಲಿಂಗ್‌ ಮಾಡಿದ ನಂತರ ದೂರು ದಾಖಲಿಸಲು ಯುವತಿ ಒಪ್ಪಿಕೊಂಡಳು ಎಂದು ವರದಿ ಮೂಲಕ ತಿಳಿದು ಬಂದಿದೆ.

17 ಶಂಕಿತರ ಡಿಎನ್‌ಎ ಮಾದರಿಗಳನ್ನು ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಲಾಗಿತ್ತು. ಆಕೆಯ ತಂದೆಯ ಡಿಎನ್‌ಎ ಮ್ಯಾಚ್‌ ಆಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ.

ಆಕೆ ನೀಡಿದ ಮಾಹಿತಿಯ ಆಧಾರದ ಮೇಲೆ ಪೊಲೀಸರು ಇಬ್ಬರನ್ನು ಬಂಧಿಸಿದ್ದರು. ಕೊನೆಗೆ ಯುವತಿಯ ತಂದೆ ಸೇರಿದಂತೆ 17 ಶಂಕಿತರಿಂದ ಡಿಎನ್ಎ ಮತ್ತು ರಕ್ತದ ಮಾದರಿಗಳನ್ನು ತೆಗೆದುಕೊಂಡು, ಅತ್ಯಾಚಾರಿಯ ಗುರುತು ಪತ್ತೆಗೆ ಭ್ರೂಣದಿಂದ ಬಂದ ಆನುವಂಶಿಕ ದತ್ತಾಂಶಗಳೊಂದಿಗೆ ಅವುಗಳನ್ನು ತಾಳೆಹಾಕಿ ನೋಡಿದರು. ಕೊನೆಗೆ ಸಂತ್ರಸ್ತೆಯ ತಂದೆಯ ಡಿಎನ್‌ಎ ಮ್ಯಾಚ್‌ ಆಗಿದೆ. ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.






- Advertisement -

Related news

error: Content is protected !!