Friday, June 19, 2026
spot_imgspot_img
spot_imgspot_img

ತಮಿಳುನಾಡು ಚುನಾವಣೆ : ಮಧುರೈ ದಕ್ಷಿಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಪ್ರಭಾರಿಯಾಗಿ ಅಕ್ಷಯ್ ರೈ ದಂಬೆಕ್ಕಾನ ನೇಮಕ

- Advertisement -
- Advertisement -

ಪುತ್ತೂರು: 2026ರ ತಮಿಳುನಾಡು ಚುನಾವಣೆಯಲ್ಲಿ ಮಧುರೈ ಜಿಲ್ಲೆಯ ಮಧುರೈ ದಕ್ಷಿಣ ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಾರ್ಟಿಯ ಪ್ರಭಾರಿಯಾಗಿ ಅಕ್ಷಯ್ ರೈ ದಂಬೆಕ್ಕಾನರವರು ಆಯ್ಕೆಯಾಗಿದ್ದಾರೆ.

2021ರ ಚುನಾವಣೆಯಲ್ಲಿ ತಮಿಳುನಾಡಿನ ಕನ್ಯಾಕುಮಾರಿ ಕೊಳಚಿಲ್‌ ಎಂಬ ವಿಧಾನಸಭಾ ಕ್ಷೇತ್ರದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು. ತದನಂತರದ ದಿನಗಳಲ್ಲಿ 2023ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಪ್ರಭಾರಿಯಾಗಿ ಕೆಲಸ ಮಾಡಿದ್ದು, ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷರ ಮೇಲೆ ವಿರೋಧ ಪಕ್ಷದವರಿಂದ ಹಲ್ಲೆ ಕೂಡ ನಡೆದಿದ್ದು ಮಂಡಲ ಅಧ್ಯಕ್ಷರನ್ನು ರಕ್ಷಿಸಲು ಹೋಗಿದ್ದ ಅಕ್ಷಯ್ ರೈ ದಂಬೆಕ್ಕಾನರವರ ಮೇಲೂ ಕೇಸು ದಾಖಲಾಗಿತ್ತು.

ಇದೀಗ 2026ರ ತಮಿಳುನಾಡು ಚುನಾವಣೆಯಲ್ಲಿ.ಮಧುರೈ ಜಿಲ್ಲೆಯ ಮಧುರೈ ದಕ್ಷಿಣ ವಿಧಾನಸಭಾ ಕ್ಷೇತ್ರದ ಪ್ರಭಾರಿಯಾಗಿ ಆಯ್ಕೆಯಾಗಿದ್ದಾರೆ.ಅಕ್ಷಯ್ ರೈ ದಂಬೆಕ್ಕಾನರವರು ಬೆಂಗಳೂರು ಕಂಬಳ ಆಯೋಜಕರಲ್ಲಿ ಒಬ್ಬರಾಗಿದ್ದು ಬೆಂಗಳೂರು ಕಂಬಳ ಸಮಿತಿಯಲ್ಲಿ ನಿರ್ದೇಶಕರಾಗಿದ್ದು ಆರ್ಗನೈಸ್ ಸೆಕ್ರೆಟರಿಯಾಗಿ ಸೇವೆ ಸಲ್ಲಿಸಿದ್ದರು. ಇವರಿಗೆ ಹಲವು ತಮಿಳು ಸಂಘ ಸಂಸ್ಥೆಗಳ ಒಡನಾಟವಿದ್ದು, ತಮಿಳು ಭಾಷೆಯಲ್ಲಿ ಒಳ್ಳೆಯ ಹಿಡಿತ ಇರುವುದರಿಂದ ಇವರಿಗೆ ಪ್ರತಿ ಬಾರಿಯೂ ತಮಿಳುನಾಡಿನಲ್ಲಿ ಜವಾಬ್ದಾರಿ ನೀಡಲಾಗುತ್ತಿದೆ.

ಪ್ರಸ್ತುತ ಅಕ್ಷಯ್ ರೈಯವರು ಬಿಜೆಪಿ ರಾಜ್ಯ ಸಾಮಾಜಿಕ ಜಾಲತಾಣದಲ್ಲಿ ಜವಾಬ್ದಾರಿಯನ್ನು ಹೊಂದಿದ್ದಾರೆ. ರಾಜಕೀಯ ರಂಗದ ಯುವ ನಾಯಕರಾಗಿರುವ ಇವರು ದಂಬೆಕ್ಕಾನ ಸದಾಶಿವ ರೈ ಮತ್ತು ಪ್ರಭಾ ಎಸ್.ರೈಯವರ ಪುತ್ರರಾಗಿದ್ದಾರೆ.

- Advertisement -

Related news

error: Content is protected !!