Monday, June 8, 2026
spot_imgspot_img
spot_imgspot_img

ಕೊಳ್ನಾಡು ಗ್ರಾಮದ ಕುಳಾಲಿನಲ್ಲಿ ತೆಂಗಿನಕಾಯಿ ಮೇಲೆ ಲಿಪಿಯಲ್ಲಿ ಬರೆದು ಒಡೆದು ಹಾಕಿದ ಸ್ಥಿತಿಯಲ್ಲಿ ಪತ್ತೆ: ವಾಮಾಚಾರ ಶಂಕೆ

- Advertisement -
- Advertisement -

ವಿಟ್ಲ: ಕೊಳ್ನಾಡು ಗ್ರಾಮದ ಕುಳಾಲು ಎಂಬಲ್ಲಿ ತೆಂಗಿನಕಾಯಿ ಒಡೆದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಅದರ ಹಿಂಭಾಗದಲ್ಲಿ ಯಾವುದೊ ಲಿಪಿಯಲ್ಲಿ ಬರೆಯಲಾಗಿದೆ. ವಾಮಾಚಾರ ನಡೆಸಲಾಗಿದೆ ಎಂಬ ಆರೋಪ ವ್ಯಕ್ತವಾಗಿದೆ.

ಬಿಜೆಪಿ ಅಭ್ಯರ್ಥಿಯ ಮನೆ ಸಂಪರ್ಕ ರಸ್ತೆಯಲ್ಲಿ ಮುಸ್ಸಂಜೆ ಹೊತ್ತಿಗೆ ಯಾವುದೋ ಲಿಪಿಯಲ್ಲಿ ಬರೆದ ತೆಂಗಿನಕಾಯಿ ಹೊಡೆದಿದ್ದು ಕಂಡುಬಂದಿದೆ. ಬಂಡಮುಗೇರು ಕ್ರಾಸ್ ನಲ್ಲಿಯೂ ಒಂದು ಯಾವುದೇ ಲಿಪಿ ಇರದ ಮಾಮೂಲಿ ತೆಂಗಿನಕಾಯಿ ಹಾಗೂ ಲಿಂಬೆ ಹುಳಿ ಒಡೆದಿರುವುದು ಕಂಡು ಬಂದಿದೆ.


ಇದನ್ನು ಮನಗಂಡ ಬಿಜೆಪಿ ಪ್ರಮುಖರು, ಕಾರ್ಯಕರ್ತರು ಕುಳಾಲಿನ ಕಾರಣಿಕ ಶಕ್ತಿ ಶ್ರೀ ವಾರಹಿ (ಮಲರಾಯಿ) ದೈವದ ಮೊರೆ ಹೋಗಿ ದೈವದ ಚಾಕ್ರಿ ಮಾಡುತ್ತಿರುವ ಹಿರಿಯರು ಆದ ದೇವು ಸಪಲ್ಯ ಅವರ ಉಪಸ್ಥಿತಿಯಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ.

ನಂತರ ಚುನಾವಣೆ ದಿವಸ ಸಂಜೆ ಬಿಜೆಪಿ ಕಾರ್ಯಕರ್ತರೊಬ್ಬವರ ಮನೆಯ ಹತ್ತಿರ ಪುನಃ ಒಂದು ತೆಂಗಿನಕಾಯಿ ಒಡೆದಿದ್ದು, ಪತ್ತೆಯಾಗಿದೆ.

ಒಡೆಯುವ ಶಬ್ಧ ಕೇಳಿದ ಕಾರ್ಯಕರ್ತ ಬಂದು ನೋಡುವಾಗ ಬಿಜೆಪಿ ಅಭ್ಯರ್ಥಿ ಮನೆ ಸಂಪರ್ಕ ರಸ್ತೆಯಲ್ಲಿ ಒಡೆದಿರುವ ಯಾವುದೋ ಲಿಪಿಯಲ್ಲಿ ಬರೆದ ತೆಂಗಿನಕಾಯಿ ಪತ್ತೆಯಾಗಿದೆ. ಇದೀಗ ಈ ಭಾಗದಲ್ಲಿ ಆತಂಕ ವ್ಯಕ್ತವಾಗಿದೆ.

- Advertisement -

Related news

error: Content is protected !!