Sunday, July 19, 2026
spot_imgspot_img
spot_imgspot_img

ಅಮೆರಿಕ–ಇಸ್ರೇಲ್ ನಿಂದ ದಾಳಿ; ಟೆಹ್ರಾನ್‌ ನಲ್ಲಿ ಆರು ಮಕ್ಕಳು ಸೇರಿ 13 ಮಂದಿ ಮೃತ್ಯು

- Advertisement -
- Advertisement -

ಟೆಹ್ರಾನ್: ಟೆಹ್ರಾನ್ ಪ್ರಾಂತ್ಯದ ಬಹರೆಸ್ತಾನ್ ಕೌಂಟಿಯ ವಸತಿ ಪ್ರದೇಶದ ಮೇಲೆ ಅಮೆರಿಕ–ಇಸ್ರೇಲ್ ಪಡೆಗಳು ನಡೆಸಿದ ದಾಳಿಯಲ್ಲಿ ಆರು ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಫಾರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಮೃತಪಟ್ಟವರಲ್ಲಿ ನಾಲ್ಕು ಹುಡುಗಿಯರು ಹಾಗೂ 10 ವರ್ಷದೊಳಗಿನ ಇಬ್ಬರು ಹುಡುಗರು ಸೇರಿದ್ದಾರೆ ಎಂದು ತಿಳಿದು ಬಂದಿದೆ.

ಈ ದಾಳಿಯಲ್ಲಿ ಒಟ್ಟು 13 ಮಂದಿ ಮೃತಪಟ್ಟಿದ್ದಾರೆ ಎಂದು ಸಂಸ್ಥೆ ತನ್ನ ವರದಿಯಲ್ಲಿ ತಿಳಿಸಿದೆ ಎಂದು Aljazeera ಉಲ್ಲೇಖಿಸಿದೆ.

ರಾತ್ರೋರಾತ್ರಿ ನಡೆದ ದಾಳಿಯಲ್ಲಿ ವಸತಿ ಪ್ರದೇಶವೇ ಗುರಿಯಾಗಿದ್ದರಿಂದ ಸಾವು-ನೋವು ಹೆಚ್ಚಾಗಿದೆ ಎನ್ನಲಾಗಿದೆ.

- Advertisement -

Related news

error: Content is protected !!