





ಮಂಗಳೂರು: ಲಯನ್ಸ್ ಇಂಟರ್ ನ್ಯಾಷನಲ್ ಡಿಸ್ಟ್ರಿಕ್ಟ್ 317 ಡಿ, ಅರಣ್ಯ ಇಲಾಖೆ ಮಂಗಳೂರು ಹಾಗೂ ಪ್ಯಾರದೀಪ್ ಫಾಸ್ಪೇಟ್ಸ್ ಲಿಮಿಟೆಡ್ ಮಂಗಳೂರು ಘಟಕ ಇವರ ಜಂಟಿ ಆಶ್ರಯದಲ್ಲಿ “ವೃಕ್ಷ ಬೀಜಾಂಕುರ ಲೋಕಾರ್ಪಣ” ಕಾರ್ಯಕ್ರಮವನ್ನು ಏಪ್ರಿಲ್ 15ರಂದು ಬುಧವಾರ ಬೆಳಿಗ್ಗೆ 10.30ಕ್ಕೆ ಕಂಬ್ಲಿಪದವು ಮುಡಿಪಿನ ಭಾರೀ ವಾಹನ ಚಾಲನಾ ತರಬೇತಿ ಕೇಂದ್ರದಲ್ಲಿ ಆಯೋಜಿಸಲಾಗಿದೆ.
ಕಾರ್ಯಕ್ರಮಕ್ಕೆ ಲಯನ್ಸ್ ಜಿಲ್ಲೆ 317 ಡಿ ಜಿಲ್ಲಾ ರಾಜ್ಯಪಾಲರಾದ ಲಯನ್ ಕುಡ್ಲಿ ಅರವಿಂದ ಶೆಣೈ ಚಾಲನೆ ನೀಡಲಿದ್ದು, ಮಂಗಳೂರು ಲೋಕಸಭಾ ಸದಸ್ಯರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.ಅರಣ್ಯ ಇಲಾಖೆಯ ವಲಯ ಅರಣ್ಯಾಧಿಕಾರಿ ರಾಜೇಶ್ ಬಳೆಗಾರ್ ಸೇರಿದಂತೆ ಪ್ಯಾರದೀಪ್ ಫಾಸ್ಪೇಟ್ಸ್ ಲಿಮಿಟೆಡ್ ಮಂಗಳೂರು ಘಟಕದ ಮುಖ್ಯ ಉತ್ಪಾದನಾ ಅಧಿಕಾರಿ, ಹೆಡ್ HR & IR, ಹಾಗೂ ಕಂಬ್ಲಿಪದವು ಭಾರೀ ವಾಹನ ಚಾಲನಾ ತರಬೇತಿ ಕೇಂದ್ರದ ಪ್ರಾಂಶುಪಾಲರಾದ ಜಯಕರ ಬಿ. ಶೆಟ್ಟಿ ಸೇರಿದಂತೆ ಹಲವರು ಘನ ಉಪಸ್ಥಿತರಿರಲಿದ್ದಾರೆ.
ಲಯನ್ಸ್ ಜಿಲ್ಲಾ ಸಂಪುಟದ ವಿವಿಧ ಪದಾಧಿಕಾರಿಗಳು ಹಾಗೂ ಸಂಯೋಜಕರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಸಾರ್ವಜನಿಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಜಿಲ್ಲಾ ಸಾರ್ವಜನಿಕ ಸಂಪರ್ಕಧಿಕಾರಿ ಸುದರ್ಶನ್ ಪಡಿಯಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.








