- Advertisement -
- Advertisement -
ವಿಟ್ಲ: ಕಂಬಳಬೆಟ್ಟು ಬದನಾಜೆ ಎಂಬಲ್ಲಿರುವ ಗುಡ್ಡಕ್ಕೆ ಆಕಸ್ಮಿಕವಾಗಿ ಬೆಂಕಿ ತಗಲಿದ್ದು, ಎಕ್ರೆಗಟ್ಟಲೇ ಗಿಡಮರಗಳು ನಾಶಗೊಂಡಿದೆ.

ವಿಟ್ಲ-ಪುತ್ತೂರು ರಸ್ತೆಗೆ ತಾಗಿಕೊಂಡಿರುವ ಬದನಾಜೆ ಎಂಬಲ್ಲಿರುವ ಗುಡ್ಡದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಈ ಬಗ್ಗೆ ಯಾರೂ ಕೂಡಾ ಗಮನಿಸಿರಲಿಲ್ಲ. ಇದೀಗ ಬೆಂಕಿತ ತೀವ್ರತೆ ಹೆಚ್ಚಾಗಿ ಕಂಬಳಬೆಟ್ಟು ಜನಪ್ರಿಯ ಸೆಂಟ್ರಲ್ ಸ್ಕೂಲ್ ನ ಹಿಂಬದಿವರೆಗೆ ಆವರಿಸಿಕೊಂಡು ಬಂದಿದೆ. ಸ್ಥಳೀಯರು ಪುತ್ತೂರು ಅಗ್ಮಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು, ನಂದಿಸುವ ಕಾರ್ಯ ನಡೆಯುತ್ತಿದೆ.
- Advertisement -








