Sunday, June 14, 2026
spot_imgspot_img
spot_imgspot_img

ಮಲ್ಪೆ: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಎಂಟು ಅಡಿ ಆಳಕ್ಕೆ ಬಿದ್ದ ನೀರಿನ ಟ್ಯಾಂಕ‌ರ್; ಕ್ಲೀನರ್‌ ಮೃತ್ಯು

- Advertisement -
- Advertisement -

ಮಲ್ಪೆ: ಚಾಲಕನ ನಿಯಂತ್ರಣ ತಪ್ಪಿ ನೀರಿನ ಟ್ಯಾಂಕರ್ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಎಂಟು ಅಡಿ ಆಳದ ಖಾಲಿ ಪ್ರದೇಶಕ್ಕೆ ಬಿದ್ದು ಕ್ಲೀನರ್ ಮೃತಪಟ್ಟ ಘಟನೆ ಮಲ್ಪೆಯಲ್ಲಿ ನಡೆದಿದೆ.

ಮೃತ ಕ್ಲೀನರ್ ಜನಾರ್ಧನ್ ಎಂದು ಗುರುತಿಸಲಾಗಿದೆ.

ನೀರಿನ ಟ್ಯಾಂಕ‌ರ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು 8 ಅಡಿ ಆಳ ಇರುವ ಖಾಲಿ ಜಾಗದಲ್ಲಿ ಬಿದ್ದಿದೆ. ಕ್ಲೀನರ್ ಜನಾರ್ಧನ್ ರವರು ಟ್ಯಾಂಕರ್ ಅಡಿಯಲ್ಲಿ ಸಿಲುಕಿದ್ದು ನಂತರ ಆಸ್ಪತ್ರೆಗೆ ದಾಖಲಿಸಿದಾಗ ವೈದ್ಯರು ಪರಿಶೀಲಿಸಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.ಚಾಲಕ ಸುಜೀತ್ ಕೂಡ ಅಪಘಾತದಲ್ಲಿ ಗಾಯಗೊಂಡಿದ್ದಾರೆ.

ಘಟನೆ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!