Sunday, July 19, 2026
spot_imgspot_img
spot_imgspot_img

ಹಾರ್ಮುಝ್ ಮೇಲೆ ನಿಯಂತ್ರಣ ಬಿಗಿಗೊಳಿಸಿದ ಇರಾನ್ – ಜಲಸಂಧಿಗೆ ಪ್ರವೇಶಿಸುವ ಹಡಗುಗಳಿಗೆ ದಾಳಿ ಎಚ್ಚರಿಕೆ

- Advertisement -
- Advertisement -

ಟೆಹರಾನ್, ಎ.10: ಹಾರ್ಮುಝ್ ಜಲಸಂಧಿಯ ಮೇಲೆ ತನ್ನ ನಿಯಂತ್ರಣವನ್ನು ಇರಾನ್ ಮತ್ತೆ ಬಿಗಿಗೊಳಿಸಿದೆ. ಮುಚ್ಚಲ್ಪಟ್ಟಿರುವ ಜಲಸಂಧಿ ಪ್ರದೇಶವನ್ನು ಪ್ರವೇಶಿಸಲು ಯತ್ನಿಸುವ ಯಾವುದೇ ಹಡಗನ್ನು ಶತ್ರುವೆಂದು ಪರಿಗಣಿಸಿ ದಾಳಿ ನಡೆಸಲಾಗುವುದೆಂದು ಇರಾನ್ ನ ಇಸ್ಲಾಮಿಕ್ ರೆವೆಲ್ಯೂಶನರಿ ಗಾರ್ಡ್ಸ್ (IRGC) ನೌಕಾದಳ ರವಿವಾರ ಎಚ್ಚರಿಕೆ ನೀಡಿದೆ.ಇರಾನ್ ಬಂದರುಗಳಿಗೆ ಪ್ರಯಾಣಿಸುವ ಅಥವಾ ಅಲ್ಲಿಂದ ನಿರ್ಗಮಿಸುವ ನೌಕೆಗಳಿಗೆ, ಅಮೆರಿಕದ ದಿಗಂಧನ ತೆರವುಗೊಳ್ಳುವವರೆಗೆ ಹಾರ್ಮುಝ್ ಜಲಸಂಧಿಯನ್ನು ಮುಚ್ಚಲಾಗುವುದು ಎಂದು ಅದು ಹೇಳಿದೆ.

ಹಾರ್ಮುಝ್ ಜಲಸಂಧಿ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ ಹೇಳಿಕೆಗಳಿಗೆ ಯಾವುದೇ ಸಿಂಧುತ್ವವಿಲ್ಲ ಎಂದು IRGC ಹೇಳಿದೆ. ಹಡಗುಗಳ ಮಾಲಕರು IRGC ನೀಡುವ ಸೂಚನೆಗಳನ್ನು ಮಾತ್ರ ಅನುಸರಿಸುವಂತೆ ಸೂಚಿಸಲಾಗಿದೆ.ಭಾರತದ ತೈಲ ಸಾಗಾಟ ಟ್ಯಾಂಕ‌ರ್ ಹಡಗುಗಳಾದ ‘ಜಗ ಅರ್ನವ್’ ಹಾಗೂ ‘ಸನ್ಮಾ‌ರ್ ಹೆರಾಲ್ಡ್ ಮೇಲೆ ಹಾರ್ಮುಝ್ ಜಲಸಂಧಿಯ ಸಮೀಪ ಇರಾನ್ ಪಡೆಗಳು ಶನಿವಾರ ಗುಂಡು ಹಾರಿಸಿದ ಬಳಿಕ ಈ ಎಚ್ಚರಿಕೆ ನೀಡಲಾಗಿದೆ.

- Advertisement -

Related news

error: Content is protected !!